ಬೆಂಗಳೂರು : ಉಚಿತ ಟಿಕೆಟ್ ಪಡೆಯಲು ಆಧಾರ್ ಕಾರ್ಡ್ ತೋರಿಸಿ ಎಂದಿದ್ದಕ್ಕೆ ಮಹಿಳಾ ಪ್ರಯಾಣಿಕರೊಬ್ಬರು ಉಗುರಿನಿಂದ ಲೇಡಿ ಕಂಡಕ್ಟರ್ ಮುಖ ಪರಚಿದ ಘಟನೆ ಬಿಎಂಟಿಸಿ ಬಸ್ ನಲ್ಲಿ ನಡೆದಿದೆ.
ಉಚಿತ ಟಿಕೆಟ್ ಪಡೆಯಲು ಗುರುತಿನ ಚೀಟಿ ತೋರಿಸುವ ವಿಚಾರವಾಗಿ ಜಗಳ ತೆಗೆದ ಖಾಸಗಿ ಕಂಪನಿ ಮಹಿಳಾ ಉದ್ಯೋಗಿ ಯೊಬ್ಬರು ಉಗುರಿನಿಂದ ಲೇಡಿ ಕಂಡಕ್ಟರ್ ಮುಖ ಪರಚಿದ್ದಾರೆ. ಬಿಎಂಟಿಸಿ ಮಹಿಳಾ ನಿರ್ವಾ ಹಕಿಯ ಮೇಲೆ ಹಲ್ಲೆ ಮಾಡಿ ಉಗುರು ಗ ಳಿಂದ ಮುಖ ಪರಚಿ ಗಾಯಗೊಳಿಸಿದ್ದಾರೆ.
ಉಚಿತ ಟಿಕೆಟ್ ನೀಡಲು ಆಧಾರ್ ಕಾರ್ಡ್ ನೀಡುವಂತೆ ಕೇಳಿದ್ದಾರೆ. ಆಧಾರ್ ಕಾರ್ಡ್ ಕೊಡಲು ತಡಮಾಡಿದ್ದಕ್ಕೆ ಸ್ವಲ್ಪ ಬೇಗ ತೋರಿಸಿ ಎಂದು ಕಂಡಕ್ಟರ್ ಕೇಳಿದ್ದಾರೆ. ಇದೇ ವಿಚಾರಕ್ಕೆ ಜಗಳ ಮಾಡಿದ ಮಹಿಳೆ ಗಲಾಟೆ ನಡೆಸಿ ಉಗುರಿನಿಂದ ಲೇಡಿ ಕಂಡಕ್ಟರ್ ಮುಖ ಪರಚಿದ್ದಾರೆ.
ಘಟನೆ ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆಸಿದ್ದು, ಬಿಎಂಟಿಸಿ ಮಹಿಳಾ ನಿರ್ವಾಹಕಿ ಸುಕನ್ಯಾ ದೂರು ನೀಡಿದ್ದಾರೆ. ಮೋನಿಷಾ (29) ರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ.