ಕಾಸರಗೋಡು : ಶಬರಿಮಲೆಯ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ನಾಳೆ ಮಕರಜ್ಯೋತಿ ದರ್ಶನವಾಗಲಿದ್ದು, ಮಕರ ಜ್ಯೋತಿ ವೀಕ್ಷಣೆಗೆ ಈಗಾಗಲೇ ಸಿದ್ಧತೆ ನಡೆಯುತ್ತಿದೆ.
ಮಕರಜ್ಯೋತಿ ದಿನದಂದು ಶ್ರೀ ಅಯ್ಯಪ್ಪಸ್ವಾಮಿ ವಿಗ್ರಹಕ್ಕೆ ತೊಡಿಸಲಿರುವ ಪವಿತ್ರ ಆಭರಣಗಳನ್ನೊಳಗೊಂಡ ಭವ್ಯ ಶೋಭಾಯಾತ್ರೆ ಆರಂಭಗೊಂಡಿದ್ದು, ನಾಳೆ ಸಂಜೆ ಸನ್ನಿಧಾನ ತಲುಪಲಿದೆ. ನಂತ್ರ ಆಭರಣಗಳನ್ನು ದೇವರ ವಿಗ್ರಹಕ್ಕೆ ತೊಡಿಸಿ ದೀಪಾರಾಧನೆ ನಡೆಯಲಿದೆ.
ದೀಪಾರಾಧನೆ ಬಳಿಕ ದೇವಾಲಯದ ಎದುರಿನ ಪೊನ್ನಂಬಲ ಬೆಟ್ಟದಲ್ಲಿ ಪವಿತ್ರ ಮಕರಜ್ಯೋತಿ ಪ್ರಜ್ವಲಿಸಲಿದೆ.