ಬೆಂಗಳೂರು : ಅವರ ಸುಸಂಸ್ಕೃತ್ವ ಅವರ ಹೇಳಿಕೆಯಲ್ಲೇ ತೋರಿಸುತ್ತದೆ ಎಂದು ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಇಂದು ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಮಂತ್ರಿಯಾಗಿ ಸಂವಿಧಾನ ಬದಲಿಸ್ತೀವಿ ಅಂದ್ರು. ಅವರಿಂದ ನಾವು ಸಂಸ್ಕೃತಿ ಬಯಸೋಕೆ ಆಗುತ್ತಾ. ಅವರ ಸುಸಂಸ್ಕೃತ್ವ ಅವರ ಹೇಳಿಕೆಯಲ್ಲೇ ತೋರಿಸುತ್ತದೆ ಎಂದು ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ರಾಜ್ಯದ ಮುಖ್ಯ ಮಂತ್ರಿಗೆ ಗೌರವ ಕೊಡುವವರೂ ಇದ್ದಾರೆ, ಗೌರವ ಕೊಡದವರು ಕೂಡ ಇದ್ದಾರೆ. ಭಾಷೆ ಬಳಕೆ ಗೊತ್ತಿಲ್ಲ ಅಂದರೆ ಅವರು ಮನುಷ್ಯರಾ..? ಕೆಟ್ಟ ಪದ ಬಳಕೆ ಅವರ ಘನತೆಗೆ ಧಕ್ಕೆ ತರುತ್ತದೆ ಎಂದರು.
ನೀನು ಬರ್ಲಿ, ಇಲ್ಲ ಬಿಡಲಿ, ರಾಮ ಜನ್ಮಭೂಮಿ ಏನೂ ನಿಲ್ಲೋದಿಲ್ಲ ಮಗನೇ ‘ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಸಂಸದ ಅನಂತ್ ಕುಮಾರ್ ಹೆಗಡೆ ಏಕವಚನದಲ್ಲಿ ವಾಗ್ಧಾಳಿ ನಡೆಸಿದ್ದಾರೆ. ಕಾಂಗ್ರೆಸ್ ನಮ್ಮ ವಿರೋಧಿ ಅಲ್ಲ, ಸಿದ್ದರಾಮಯ್ಯ ನಮ್ಮ ವಿರೋಧಿ ಎಂದು ಅನಂತ್ ಕುಮಾರ್ ಹೆಗಡೆ ಹೇಳಿಕೆ ನೀಡಿದ್ದರು.