ಬೆಂಗಳೂರು : ‘ ಹೈಕಮಾಂಡ್’ ಹೇಳಿದ್ರೆ ಮಾತ್ರ ರಾಮ ಮಂದಿರಕ್ಕೆ ಹೋಗ್ತೀವಿ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.
ರಾಮಮಂದಿರಕ್ಕೆ ಹೋಗುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರ ನೀಡಿದ ಗೃಹ ಸಚಿವರು ‘ ಹೈಕಮಾಂಡ್ ಹೇಳಿದರೆ ಜ.22 ರ ನಂತರವೂ ರಾಮಮಂದಿರಕ್ಕೆ ಹೋಗುತ್ತೇವೆ, ಸಿಎಂ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ. ಸದ್ಯ, ಹೈಕಮಾಂಡ್ ರಾಮಮಂದಿರಕ್ಕೆ ಹೋಗಬಾರದು ಎಂದು ನಿರ್ಧಾರ ಕೈಗೊಂಡಿದೆ. ಒಂದು ವೇಳೆ ಜ.22 ರ ಬಳಿಕ ಹೋಗುವ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡಿದ್ರೆ ನಾವು ಹೋಗುತ್ತೇವೆ ಎಂದು ಹೇಳಿದರು.
ನಮ್ಮದು ರಾಷ್ಟ್ರೀಯ ಪಕ್ಷ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತಾರೋ ಅದರಂತೆ ನಡೆಯಬೇಕು. ಹೈಕಮಾಂಡ್ ಬೇಡ ಎಂದರೆ ಬೇಡ, ಹೋಗಿ ಅಂದರೆ ಹೋಗುತ್ತೇವೆ. ಅವರ ವಿರುದ್ಧ ನಾವು ನಿಲುವು ತೆಗೆದುಕೊಳ್ಳಲು ಆಗಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದರು.
ಜ.22 ರ ಬಳಿಕ ಒಂದು ದಿನ ನಾನು ರಾಮಮಂದಿರಕ್ಕೆ ಹೋಗುತ್ತೇನೆ, ಹೇಗೆ ಮಾಡಿದ್ದಾರೆ ಎಂದು ನೋಡಿಕೊಂಡು ಬರುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ನಿನ್ನೆ ಹೇಳಿದ್ದರು.