ಚಳಿಗಾಲದಲ್ಲಿ ಬಿಸಿ ಬಿಸಿಯಾದ ಸ್ನಾಕ್ಸ್ ಸಿಕ್ಕರೆ ಅದೇ ಸ್ವರ್ಗ. ಜೊತೆಗೆ ಚಹಾ ಅಥವಾ ಕಾಫಿ ಸವಿಯಲು ಎಲ್ಲರೂ ಇಷ್ಟಪಡುತ್ತಾರೆ. ಚಳಿಗಾಲದಲ್ಲಿ ಜನರು ಆಹಾರದ ಬಗ್ಗೆ ಹೆಚ್ಚು ಗಮನಕೊಡುವುದೇ ಇಲ್ಲ. ಕ್ರೇವಿಂಗ್ಸ್ಗೆ ತಕ್ಕಂತೆ ರುಚಿಕರ ತಿನಿಸುಗಳನ್ನು ತಿನ್ನುತ್ತಾರೆ. ಪರಿಣಾಮ ಚಳಿಗಾಲದಲ್ಲಿ ಬೇಡವೆಂದರೂ ತೂಕ ಹೆಚ್ಚಾಗುತ್ತದೆ.
ತೂಕ ಹೆಚ್ಚಾಗುವುದಕ್ಕೆ ಕಾರಣ ನಮ್ಮ ಅಭ್ಯಾಸಗಳು. ಕೆಲವು ಪದಾರ್ಥಗಳನ್ನು ತೂಕವನ್ನು ಬಹಳ ಬೇಗ ಜಾಸ್ತಿ ಮಾಡುತ್ತವೆ. ಜೊತೆಗೆ ಚಳಿಯಲ್ಲಿ ವ್ಯಾಯಾಮ ಅಥವಾ ವಾಕಿಂಗ್ನಂತಹ ಚಟುವಟಿಕೆಗಳನ್ನೂ ಕಡಿಮೆ ಮಾಡಿಬಿಡುತ್ತೇವೆ. ಶೀತ ಋತುವಿನಲ್ಲಿ ಎಣ್ಣೆಯುಕ್ತ ಮತ್ತು ಮಸಾಲೆಯುಕ್ತ ಆಹಾರದಿಂದ ದೂರವಿರಬೇಕು.
ಪರೋಟ – ಉತ್ತರ ಭಾರತೀಯರಿಗಂತೂ ಪರೋಟ ಬಹಳ ಪ್ರಿಯವಾದ ತಿನಿಸು. ಚಳಿಗಾಲದಲ್ಲಿ ಶುಂಠಿ ಬೆರೆಸಿದ ಚಹಾದ ಜೊತೆಗೆ ಬಿಸಿ ಬಿಸಿ ಪರೋಟವನ್ನು ತಿನ್ನುತ್ತಾರೆ. ಪರೋಟಾಕ್ಕೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಬೆಣ್ಣೆ ಮತ್ತು ತುಪ್ಪವನ್ನು ಹಾಕಿ ಬೇಯಿಸಲಾಗುತ್ತದೆ. ಇದರಿಂದ ಬಹುಬೇಗ ತೂಕ ಹೆಚ್ಚಾಗುತ್ತದೆ.
ಚಹಾ – ಚಹಾ ಭಾರತೀಯರ ಪ್ರಿಯವಾದ ಪಾನೀಯ. ಅನೇಕರು ದಿನಕ್ಕೆ ನಾಲ್ಕಾರು ಬಾರಿ ಚಹಾ ಕುಡಿಯುತ್ತಾರೆ. ಬಹಳಷ್ಟು ಸಕ್ಕರೆ ಬೆರೆಸಿದ ಚಹಾವನ್ನು ಹೆಚ್ಚು ಕುಡಿಯುವುದರಿಂದ ತೂಕ ಹೆಚ್ಚಾಗುತ್ತದೆ.
ಕ್ರೀಮಿ ಸೂಪ್ – ಸೂಪ್ ಆರೋಗ್ಯಕರ ಆಹಾರಗಳಲ್ಲೊಂದು. ಆದರೆ ಸೂಪ್ಗೆ ಹೆಚ್ಚಿನ ಪ್ರಮಾಣದಲ್ಲಿ ಕೆನೆ ಅಥವಾ ಕ್ರೀಮ್ ಬೆರೆಸಿದರೆ ಅದರಲ್ಲಿರುವ ಅತಿಯಾದ ಕ್ಯಾಲೋರಿ ನಮ್ಮ ತೂಕವನ್ನು ಹೆಚ್ಚಿಸುತ್ತದೆ. ಹಾಗಾಗಿ ಚಳಿಗಾಲದಲ್ಲಿ ಕ್ರೀಮಿ ಸೂಪ್ ಕುಡಿಯಬಾರದು.
ವೈಟ್ ಬ್ರೆಡ್ – ವೈಟ್ ಬ್ರೆಡ್ ಕೂಡ ಆರೋಗ್ಯಕ್ಕೆ ಹಾನಿಕರ. ಇದು ನಮ್ಮ ತೂಕವನ್ನು ತ್ವರಿತವಾಗಿ ಹೆಚ್ಚಿಸುತ್ತದೆ. ರಕ್ತದಲ್ಲಿನ ಸಕ್ಕರೆಯ ಪ್ರಮಾಣದ ಮೇಲೆ ಪರಿಣಾಮ ಬೀರುತ್ತದೆ.