ಸಾಮಾಜಿಕ ಮಾಧ್ಯಮಗಳ ಆಗಮನದೊಂದಿಗೆ, ವಿವಿಧ ರೀತಿಯ ನಕಲಿ ಅಭಿಯಾನಗಳು ಹೆಚ್ಚು ಸದ್ದು ಮಾಡುತ್ತಿರುತ್ತವೆ. ಈ ನಡುವೆ 500 ರೂಪಾಯಿ ನೋಟುಗಳು ಅಮಾನ್ಯವಾಗಿವೆ ಎಂಬ ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕೇಂದ್ರ ಸರ್ಕಾರದ ಪಿಐಬಿ ಫ್ಯಾಕ್ಟ್ ಚೆಕ್ ಈ ಬಗ್ಗೆ ಸ್ಪಷ್ಟತೆ ನೀಡಿದೆ. ಈ ಅಭಿಯಾನದಲ್ಲಿ ಯಾವುದೇ ಸತ್ಯವಿಲ್ಲ ಎಂದು ತಿಳಿಸಿದ್ದು. ನಕ್ಷತ್ರ (*) ಚಿಹ್ನೆಯನ್ನು ಹೊಂದಿರುವ 500 ರೂ ನೋಟುಗಳು 2016 ರಿಂದ ಚಲಾವಣೆಯಲ್ಲಿವೆ. ಇವು ನಕಲಿ ನೋಟುಗಳಲ್ಲ ಎಂದು ಆರ್ಬಿಐ ದೃಢಪಡಿಸಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವದಂತಿಗಳಿಗೆ ಆರ್ಬಿಐ ಈಗಾಗಲೇ ಸ್ಪಷ್ಟನೆ ನೀಡಿದೆ. ಕರೆನ್ಸಿ ನೋಟು ಸಂಖ್ಯೆ ಫಲಕದಲ್ಲಿ ನಕ್ಷತ್ರ (*) ಚಿಹ್ನೆಯನ್ನು ಮುದ್ರಿಸಿದರೆ, ಅದನ್ನು ಬದಲಿಸಿದ ಅಥವಾ ಮರುಮುದ್ರಿತ ನೋಟಾಗಿ ಗುರುತಿಸಬೇಕು ಎಂದು ತಿಳಿಸಿದೆ.
https://twitter.com/PIBFactCheck/status/1745734362140901433?ref_src=twsrc%5Etfw%7Ctwcamp%5Etweetembed%7Ctwterm%5E1745734362140901433%7Ctwgr%5Ea631892c2d8cc52db8a0c360c2c0807940e97994%7Ctwcon%5Es1_c10&ref_url=https%3A%2F%2Fapi-news.dailyhunt.in%2F