ನವದೆಹಲಿ: ಪಶ್ಚಿಮ ಬಂಗಾಳದ ಹೌರಾ ಭಾರತದ ಅತ್ಯಂತ ಕೊಳಕು ನಗರವಾಗಿದೆ ಎಂದು ಇತ್ತೀಚೆಗೆ ಬಿಡುಗಡೆಯಾದ ವಾರ್ಷಿಕ ಸ್ವಚ್ಛತಾ ಸಮೀಕ್ಷೆ ‘ಸ್ವಚ್ಛ ಸರ್ವೇಕ್ಷಣ್’ ತಿಳಿಸಿದೆ.
ವಿಶೇಷವೆಂದರೆ, 1 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ 10 ಕೊಳಕು ನಗರಗಳು ಪಶ್ಚಿಮ ಬಂಗಾಳದವು. ಕಲ್ಯಾಣಿ, ಮಧ್ಯಗ್ರಾಮ್, ಕೃಷ್ಣನಗರ, ಅಸನ್ಸೋಲ್, ರಿಶ್ರಾ, ಬಿಧಾನ್ನಗರ್, ಕಾಂಚ್ರಾಪಾರಾ, ಕೋಲ್ಕತಾ ಮತ್ತು ಭಟ್ಪಾರಾ ಈ ವಿಭಾಗದಲ್ಲಿ ಹೌರಾ ನಂತರ ದೇಶದ ಅತ್ಯಂತ ಕೊಳಕು ನಗರಗಳಾಗಿವೆ ಎಂದು ಸಮೀಕ್ಷೆ ತಿಳಿಸಿದೆ.
ಇನ್ನು ಇಂದೋರ್ ಮತ್ತು ಸೂರತ್ ಭಾರತದ ಸ್ವಚ್ಛ ನಗರಗಳಾಗಿ ಆಯ್ಕೆಯಾಗಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಇಂದೋರ್ ಸತತ ಏಳನೇ ಬಾರಿಗೆ ಕಿರೀಟವನ್ನು ಪಡೆದರೆ, ಸೂರತ್ ಗೆ ಇದು ಮೊದಲನೆಯದು.