ಈಗಿನ ದಿನಗಳಲ್ಲಿ ವರ್ಕ್ ಫ್ರಂ ಹೋಮ್, ಆನ್ಲೈನ್ ಮೀಟಿಂಗ್ ಸಾಮಾನ್ಯವಾಗಿದೆ. ಆದ್ರೆ ಕೊರೊನಾ, ಲಾಕ್ ಡೌನ್ ಸಮಯದಲ್ಲಿ ಅನೇಕರಿಗೆ ಆನ್ಲೈನ್ ಮೀಟಿಂಗ್ ಹೇಗೆ ನಡೆಯುತ್ತೆ, ಅದಕ್ಕೆ ಹೇಗೆ ಸೇರಿಕೊಳ್ಳಬೇಕು ಎನ್ನುವ ಸರಿಯಾದ ಮಾಹಿತಿ ಇರಲಿಲ್ಲ. ಟೆಕ್ನಾಲಜಿ ಸರಿಯಾಗಿ ತಿಳಿಯದ ಕಾರಣ ಅನೇಕ ಸಮಸ್ಯೆಗಳು ಆಗ್ತಿದ್ದವು.
ನಮ್ಮ ಇಡೀ ದೇಹ ವಿಡಿಯೋದಲ್ಲಿ ಕಾಣೋದಿಲ್ಲ ಎನ್ನುವ ಕಾರಣಕ್ಕೆ ಅಸ್ತವ್ಯಸ್ತವಾಗಿ ಡ್ರೆಸ್ ಹಾಕಿಕೊಂಡವರು, ಮೀಟಿಂಗ್ ನಡೆಯುತ್ತಿದ್ದಾಗ ಮಕ್ಕಳ, ಸಂಗಾತಿಯ ಗಲಾಟೆಯಿಂದ ತಮಾಷೆಗೆ ಒಳಗಾದವರ ಸಂಖ್ಯೆ ಬಹಳಷ್ಟಿದೆ. ಈಗ ಮಿಚೆಲ್ ಹೆಸರಿನ ಮಹಿಳೆಯೊಬ್ಬಳು ತನಗಾದ ಅನುಭವವನ್ನು ಹಂಚಿಕೊಂಡಿದ್ದಾಳೆ.
ಮಿಚೆಲ್ ಟಿಕ್ ಟಾಕ್ ನಲ್ಲಿ ತನ್ನ ವಿಡಿಯೋ ಹಂಚಿಕೊಂಡಿದ್ದಾಳೆ. ಆ ವಿಡಿಯೋದಲ್ಲಿ ಏನಾಯ್ತು ಎಂಬುದನ್ನು ಹೇಳಿದ್ದಾಳೆ. ಆಕೆ ಝೂಮ್ ಮೀಟಿಂಗ್ ನಲ್ಲಿ ಪಾಲ್ಗೊಂಡಿದ್ದಳಂತೆ. ಆಕೆ ಜೊತೆ ಅನೇಕ ಸಹೋದ್ಯೋಗಿಗಳು ಮೀಟಿಂಗ್ ನಲ್ಲಿದ್ದರಂತೆ. ಈ ವೇಳೆ ಮಿಚೆಲ್ ಕ್ಯಾಮರಾದಲ್ಲಿ ತೊಂದರೆ ಕಾಣಿಸಿಕೊಂಡಿದೆ.
ಕ್ಯಾಮರಾ ಫ್ರೀಜ್ ಆಗಿದೆ. ಕ್ಯಾಮರಾದಲ್ಲಿ ನಾನು ಕಾಣ್ತಿಲ್ಲ ಎಂದುಕೊಂಡ ಮಿಚೆಲ್ ಈ ಸಮಯದಲ್ಲಿ ತನ್ನ ಡ್ರೆಸ್ ಸರಿಮಾಡಿಕೊಂಡಿದ್ದಾಳೆ. ಆದ್ರೆ ಮೀಟಿಂಗ್ ನಲ್ಲಿದ್ದ ಕೆಲ ಸಹೋದ್ಯೋಗಿಗಳು ನಗ್ತಿದ್ದರೆ ಮತ್ತೆ ಕೆಲವರ ಮುಖಭಾವ ಬದಲಾಗಿದೆ. ಇದೆಲ್ಲವನ್ನು ನೋಡಿ ಮಿಚೆಲ್ ಮುಜುಗರಕ್ಕೊಳಗಾಗಿದ್ದಾಳೆ.
ಘಟನೆ ನಡೆದು ತುಂಬಾ ದಿನವಾಗಿದೆ. ಆದ್ರೆ ಅದನ್ನು ನನ್ನಿಂದ ಮರೆಯೋಕೆ ಸಾಧ್ಯವಾಗ್ತಿಲ್ಲ. ಆ ದಿನ ನಿಜವಾಗ್ಲೂ ಸಹೋದ್ಯೋಗಿಗಳು ನಾನು ಬಟ್ಟೆ ಸರಿಮಾಡಿದ್ದನ್ನು ನೋಡಿದ್ರಾ ಎಂಬುದು ಗೊತ್ತಿಲ್ಲ. ಈ ಬಗ್ಗೆ ನನಗೆ ಪ್ರಶ್ನೆ ಕೇಳಲು ಮುಜುಗರವಾಗುತ್ತದೆ ಎಂದು ಮಿಚೆಲ್ ಹೇಳಿದ್ದಾಳೆ. ಆಕೆ ವಿಡಿಯೋಕ್ಕೆ ಸಾಕಷ್ಟು ಕಮೆಂಟ್ ಬಂದಿದ್ದು, ಜನರು ಕೆಲಸ ಬಿಡ್ತಿದ್ದೆ, ಹೆಸರು ಬದಲಿಸಿಕೊಳ್ತಿದ್ದೆ ಎಂದೆಲ್ಲ ಮಿಚೆಲ್ ಕಾಲೆಳೆದಿದ್ದಾರೆ.