ಬೆಂಗಳೂರು : ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಬಾಂಬ್ ಬೆದರಿಕೆ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಇತ್ತೀಚೆಗಷ್ಟೇ ಬೆಂಗಳೂರಿನ ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿತ್ತು. ಉಗ್ರ ಸಂಘಟನೆಯ ಹೆಸರು ಉಲ್ಲೇಖ ಮಾಡಿ ಬಾಂಬ್ ಬೆದರಿಕೆಯೊಡ್ಡಲಾಗಿದ್ದು, ಕಬ್ಬನ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.ಇದೀಗ ಈ ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಬಾಂಬ್ ಬೆದರಿಕೆ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಬೆಂಗಳೂರು ನಗರದ ಹೃದಯ ಭಾಗದಲ್ಲಿರುವ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯಕ್ಕೆ ಕಳೆದ ಶುಕ್ರವಾರ ಬಾಂಬ್ ಬೆದರಿಕೆ ಇಮೇಲ್ ಬಂದಿದ್ದು, 3 ಗಂಟೆಗಳ ಕಾಲ ಅದನ್ನು ಬಂದ್ ಮಾಡಲಾಗಿತ್ತು. ಸಂಪೂರ್ಣ ಪರಿಶೀಲನೆಯ ನಂತರ ಅದನ್ನು ಹುಸಿ ಇಮೇಲ್ ಎಂದು ಘೋಷಿಸಲಾಗಿತ್ತು.ಮುಂಜಾನೆ 4.40ರ ಸುಮಾರಿಗೆ ಸರ್ಕಾರಿ ಮ್ಯೂಸಿಯಂನ ಅಧಿಕೃತ ಐಡಿಗೆ ಇಮೇಲ್ ಕಳುಹಿಸಲಾಗಿತ್ತು. ವಸ್ತುಸಂಗ್ರಹಾಲಯದೊಳಗೆ ಬಾಂಬ್ ಇಡಲಾಗಿದೆ. ಅದು ಯಾವಾಗ ಬೇಕಾದರೂ ಸ್ಪೋಟಗೊಳ್ಳಬಹುದು ಎಂದು ಮೇಲ್ ನಲ್ಲಿ ಬೆದರಿಕೆಯೊಡ್ಡಲಾಗಿತ್ತು.