ನವದೆಹಲಿ: ಕೋವಿಡ್ -19 ಉಪ-ರೂಪಾಂತರ ಜೆಎನ್ .1 15 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹರಡಿದ್ದು, ಇಲ್ಲಿಯವರೆಗೆ ಒಟ್ಟು 923 ಸೋಂಕಿನ ಪ್ರಕರಣಗಳು ವರದಿಯಾಗಿವೆ ಎಂದು ಐಎನ್ಎಸ್ಎಸಿಒಜಿ ತಿಳಿಸಿದೆ.
ಇಂಡಿಯನ್ ಸಾರ್ಸ್-ಕೋವ್-2 ಜೆನೋಮಿಕ್ಸ್ ಕನ್ಸೋರ್ಟಿಯಂ ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಕರ್ನಾಟಕದಲ್ಲಿ 214, ಮಹಾರಾಷ್ಟ್ರ 170, ಕೇರಳ 154, ಆಂಧ್ರಪ್ರದೇಶ 105, ಗುಜರಾತ್ 76 ಮತ್ತು ಗೋವಾ 66)ಪ್ರಕರಣಗಳು ವರದಿಯಾಗಿವೆ.
ತೆಲಂಗಾಣ ಮತ್ತು ರಾಜಸ್ಥಾನದಲ್ಲಿ ತಲಾ 32, ಛತ್ತೀಸ್ಗಢದಲ್ಲಿ 25, ತಮಿಳುನಾಡಿನಲ್ಲಿ 22, ದೆಹಲಿಯಲ್ಲಿ 16, ಹರಿಯಾಣದಲ್ಲಿ 5, ಒಡಿಶಾದಲ್ಲಿ 3, ಪಶ್ಚಿಮ ಬಂಗಾಳದಲ್ಲಿ 2 ಮತ್ತು ಉತ್ತರಾಖಂಡದಲ್ಲಿ 1 ಪ್ರಕರಣ ದಾಖಲಾಗಿದೆ.