BIG NEWS : ರಾಜ್ಯದ ಎಲ್ಲಾ ಪೆಟ್ರೋಲ್ ಬಂಕ್ ಗಳಲ್ಲಿ ಇಂದಿನಿಂದ ಕನ್ನಡದಲ್ಲೂ ದರ ಪಟ್ಟಿ

ಬೆಂಗಳೂರು : ಕರ್ನಾಟಕದ ಎಲ್ಲ ಪೆಟ್ರೋಲ್‌ ಬಂಕ್‌ ಗಳಲ್ಲಿ ಇಂದಿನಿಂದ ತೈಲ ಬೆಲೆ ಸೂಚಿಸುವ ಫಲಕ ಇಂಗ್ಲಿಷ್‌ ಮತ್ತು ಹಿಂದಿ ಜೊತೆಗೆ ಕನ್ನಡದಲ್ಲೂ ಇರಲಿದೆ.

ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಹರ್ದೀಪ್‌ ಸಿಂಗ್‌ ಪುರಿ ಈ ಕುರಿತು ಮಾಹಿತಿ ನೀಡಿದ್ದು, ರಾಜ್ಯದ ಎಲ್ಲ ಪೆಟ್ರೋಲ್‌ ಬಂಕ್‌ ಗಳಲ್ಲಿ ಇಂಗ್ಲಿಷ್‌, ಹಿಂದಿ ಜೊತೆಗೆ ಇನ್ಮುಂದೆ ಕನ್ನಡದಲ್ಲೂ ದರ ಪಟ್ಟಿ ಇರಲಿದೆ ಎಂದು ತಿಳಿಸಿದ್ದಾರೆ.

ಪೆಟ್ರೋಲ್‌ ಬಂಕ್‌ ಗಳಲ್ಲಿ ತೈಲ ಬೆಲೆಯ ಫಲಕದಲ್ಲಿ ಸ್ಥಳೀಯ ಭಾಷೆಯಾದ ಕನ್ನಡದಲ್ಲಿ ಫಲಕ ಇರಬೇಕು ಎಂಬ ಮನವಿ ಇತ್ತು. ಕೇವಲ ಹಿಂದಿ ಮತ್ತು ಇಂಗ್ಲಿಷ್‌ ನಲ್ಲಿರುತ್ತದೆ. ಕನ್ನಡದಲ್ಲೂ ಇರಬೇಕು ಎಂಬ ಮನವಿಗೆ ಸ್ಪಂದಿಸಿರುವ ಸಚಿವರು, ಎಲ್ಲ ಬಂಕ್‌ ಗಳಲ್ಲಿ ತೈಲ ದರದ ಫಲಕಗಳಲ್ಲಿ ಕನ್ನಡವೂ ಇರಬೇಕು ಎಂಬ ಸೂಚನೆಯನ್ನು ತೈಲ ಕಂಪನಿಗಳಿಗೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read