ಆದಾಯ ತೆರಿಗೆ, ಮನೆ ತೆರಿಗೆ, ನೀರಿನ ತೆರಿಗೆ ಇಂತಹ ಹಲವು ತೆರಿಗೆಗಳ ಬಗ್ಗೆ ನಮಗೆಲ್ಲಾ ಗೊತ್ತಿದೆ. ಆದರೆ ಕೆಲವೊಂದು ವಿಚಿತ್ರ ತೆರಿಗೆಗಳ ಬಗ್ಗೆ ನೀವು ಹಿಂದೆಂದೂ ಕೇಳಿರಲಿಕ್ಕಿಲ್ಲ.
ಮೂತ್ರ ತೆರಿಗೆ – ಇದು ವಿಚಿತ್ರವೆನಿಸಿದರೂ ಸತ್ಯ. ಪ್ರಾಚೀನ ರೋಮ್ನಲ್ಲಿ ಮೂತ್ರಕ್ಕೆ ತೆರಿಗೆ ವಿಧಿಸಲಾಗಿತ್ತು. ಶ್ರೀಮಂತರ ಬಟ್ಟೆ ಒಗೆಯಲು ಮೂತ್ರವನ್ನು ಬಳಸಲಾಗುತ್ತಿತ್ತು. ರೋಮನ್ ರಾಜ ವೆಸ್ಪಾಸಿಯನ್ ಸಾರ್ವಜನಿಕ ಮೂತ್ರದ ವಿತರಣೆಯ ಮೇಲೆ ತೆರಿಗೆ ವಿಧಿಸಲು ಕಾನೂನನ್ನು ಜಾರಿಗೆ ತಂದನು. ಮೂತ್ರದ ಮೇಲೆ ಬಹಳ ದುಬಾರಿ ತೆರಿಗೆ ಇತ್ತು.
ಟೋಪಿ ಧರಿಸಲು ತೆರಿಗೆ – 1784 ರಲ್ಲಿ, ಬ್ರಿಟಿಷ್ ಪ್ರಧಾನಿ ವಿಲಿಯಂ ಪಿಟ್ ಪುರುಷರ ಟೋಪಿಗಳ ಮೇಲೆ ತೆರಿಗೆಯನ್ನು ವಿಧಿಸಿದರು. ಈ ತೆರಿಗೆಯ ನಿಯಮಗಳನ್ನು ಅನುಸರಿಸದವರಿಗೆ ಮರಣದಂಡನೆ ವಿಧಿಸಲಾಯಿತು. ಫ್ರಾನ್ಸ್ ಜೊತೆಗಿನ ಯುದ್ಧದಿಂದಾಗಿ ಇಂಗ್ಲೆಂಡ್ ಸ್ಥಿತಿ ಹದಗೆಟ್ಟಿತ್ತು. ಖಜಾನೆ ತುಂಬಿಸಲು ಟೋಪಿ ತೆರಿಗೆ ವಿಧಿಸಲಾಯ್ತು. ಈ ತೆರಿಗೆಯನ್ನು 1811 ರಲ್ಲಿ ರದ್ದುಗೊಳಿಸಲಾಯಿತು.
ಹಸುವಿನ ಮೇಲೆ ತೆರಿಗೆ – ನ್ಯೂಜಿಲೆಂಡ್ನಲ್ಲಿ ಹಸು ತೇಗಿದರೂ ಅವುಗಳ ಮೇಲೆ ತೆರಿಗೆ ವಿಧಿಸಲಾಗುತ್ತಿತ್ತು. ಇದಕ್ಕೆ ಜಾಗತಿಕ ತಾಪಮಾನದ ವಿರುದ್ಧದ ಹೋರಾಟದ ಹೆಸರಿಡಲಾಯ್ತು.
ಉಪ್ಪಿನ ಮೇಲೆ ತೆರಿಗೆ – ಉಪ್ಪು ಇಲ್ಲದೆ ಊಟ ಅಪೂರ್ಣ. ಅದರ ಮೇಲೂ ತೆರಿಗೆ ವಿಧಿಸಲಾಯಿತು. 14ನೇ ಶತಮಾನದಲ್ಲಿ ಫ್ರಾನ್ಸ್ನಲ್ಲಿ ಉಪ್ಪಿನ ಮೇಲೆ ತೆರಿಗೆ ಹಾಕಲಾಯ್ತು. ಬ್ರಿಟಿಷರು 187 ವರ್ಷಗಳ ಕಾಲ ಫ್ರಾನ್ಸ್ನಲ್ಲಿ ಉಪ್ಪು ಪೂರೈಕೆಯ ಮೇಲೆ ನಿಯಂತ್ರಣವನ್ನು ಹೊಂದಿದ್ದರು. 2ನೇ ಮಹಾಯುದ್ಧದ ನಂತರ ಈ ತೆರಿಗೆಯನ್ನು ತೆಗೆದುಹಾಕಲಾಯಿತು.
ಸಂಬಂಧಗಳನ್ನು ಹೊಂದಲು ತೆರಿಗೆ – 1971 ರಲ್ಲಿ ಅಮೆರಿಕದ ರೋಡ್ ಐಲ್ಯಾಂಡ್ ಲೈಂಗಿಕ ಸಂಭೋಗದ ಮೇಲೆ ತೆರಿಗೆ ವಿಧಿಸಿತು. ದೇಶದ ಪರಿಸ್ಥಿತಿಯನ್ನು ಸುಧಾರಿಸಲು ಡೆಮಾಕ್ರಟಿಕ್ ಸ್ಟೇಟ್ ಶಾಸಕ ಬರ್ನಾರ್ಡ್ ಗ್ಲಾಡ್ಸ್ಟೋನ್ ಲೈಂಗಿಕ ಸಂಭೋಗದ ಮೇಲೆ ಎರಡು ಡಾಲರ್ ತೆರಿಗೆಯನ್ನು ವಿಧಿಸಲು ಪ್ರಸ್ತಾಪಿಸಿದರು. ಆದರೆ ಭಾರೀ ವಿರೋಧದ ಕಾರಣ ಅದನ್ನು ಕಾರ್ಯಗತಗೊಳಿಸಲು ಸಾಧ್ಯವಾಗಲಿಲ್ಲ. ಜರ್ಮನಿಯಲ್ಲಿ ಪ್ರತಿ ವೇಶ್ಯೆಯು ತಿಂಗಳಿಗೆ 150 ಯುರೋಗಳಷ್ಟು ತೆರಿಗೆಯನ್ನು ಪಾವತಿಸಬೇಕಾಗುತ್ತದೆ.
ಅವಿವಾಹಿತರಿಗೆ ತೆರಿಗೆ – 9ನೇ ಶತಮಾನದಲ್ಲಿ ರೋಮ್ನಲ್ಲಿ ಅವಿವಾಹಿತರಿಂದ ತೆರಿಗೆಯನ್ನು ಸಂಗ್ರಹಿಸಲಾಯಿತು. ರೋಮನ್ ಚಕ್ರವರ್ತಿ ಅಗಸ್ಟಸ್ ಮದುವೆಯನ್ನು ಪ್ರೋತ್ಸಾಹಿಸಲು ಕನ್ಯೆಯರಿಂದ ತೆರಿಗೆ ಸಂಗ್ರಹಿಸಲು ಪ್ರಾರಂಭಿಸಿದನು. ಜೊತೆಗೆ ಮಗುವಿಗೆ ಜನ್ಮ ನೀಡದ ವಿವಾಹಿತರಿಂದಲೂ ತೆರಿಗೆ ಸಂಗ್ರಹಿಸಲಾಯಿತು. ಈ ತೆರಿಗೆಯನ್ನು 20 ರಿಂದ 60 ವರ್ಷ ವಯಸ್ಸಿನ ಪುರುಷರೂ ಪಾವತಿಸಬೇಕಾಗಿತ್ತು.
ಆತ್ಮದ ಮೇಲೆ ತೆರಿಗೆ – ರಷ್ಯಾದಲ್ಲಿ 1718 ರಲ್ಲಿ ಕಿಂಗ್ ಪೀಟರ್ ದಿ ಗ್ರೇಟ್, ಆತ್ಮದ ಮೇಲೆ ತೆರಿಗೆ ವಿಧಿಸಿದ್ದ. ದೆವ್ವ ಮತ್ತು ಆತ್ಮಗಳಂತಹ ವಿಷಯಗಳನ್ನು ನಂಬುವ ಜನರಿಂದ ಈ ತೆರಿಗೆಯನ್ನು ಸಂಗ್ರಹಿಸಲಾಗಿದೆ.
ಗಡ್ಡದ ಮೇಲೆ ತೆರಿಗೆ – 1535ರಲ್ಲಿ ಇಂಗ್ಲೆಂಡಿನಲ್ಲಿ ಗಡ್ಡ ಬಿಟ್ಟವರಿಗೆ ತೆರಿಗೆ ವಿಧಿಸಲಾಯಿತು. ಇಂಗ್ಲೆಂಡಿನ ರಾಜ ಹೆನ್ರಿ 7 ಈ ತೆರಿಗೆಯನ್ನು ವಿಧಿಸಿದ. ಎರಡು ವಾರಗಳಿಗಿಂತ ಹೆಚ್ಚು ಕಾಲ ಉದ್ದನೆಯ ಗಡ್ಡವನ್ನು ಇಟ್ಟುಕೊಂಡಿದ್ದಕ್ಕಾಗಿ ಪುರುಷರಿಂದ ತೆರಿಗೆ ಸಂಗ್ರಹಿಸಲಾಗಿತ್ತು.