ಪ್ರಧಾನಿ ನರೇಂದ್ರ ಮೋದಿ ಅವರ ಲಕ್ಷದ್ವೀಪ ಭೇಟಿ ಮಾಲ್ಡೀವ್ಸ್ನಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಮಾಲ್ಡೀವ್ಸ್ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಸಂದರ್ಭದಲ್ಲಿಯೇ ಮೋದಿ ಅವರ ಲಕ್ಷದ್ವೀಪ ಭೇಟಿಯ ವೈರಲ್ ಫೋಟೋಗಳನ್ನು ನೋಡಿ ಬೆಚ್ಚಿಬಿದ್ದಿದೆ. ಯಾಕಂದ್ರೆ ಸದ್ಯ ಆರ್ಥಿಕತೆಯನ್ನು ನಿರ್ವಹಿಸುವುದು ಈ ದೇಶದ ಮುಂದಿರೋ ದೊಡ್ಡ ದೊಡ್ಡ ಸವಾಲು.
ಪ್ರಧಾನಿ ಮೋದಿ ಲಕ್ಷದ್ವೀಪಕ್ಕೆ ಭೇಟಿ ನೀಡುವಂತೆ ಜನರಿಗೆ ಮನವಿ ಮಾಡಿದ್ದರು. ಮೋದಿ ಮಾಡಿರೋ ಈ ಮನವಿ ಮಾಲ್ಡೀವ್ಸ್ನ ಹೃದಯ ಬಡಿತವನ್ನು ಹೆಚ್ಚಿಸಿದೆ. ಮಾಲ್ಡೀವ್ಸ್ ನಾಯಕರು ಪ್ರಧಾನಿ ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನಂತರ #BoycottMaldives ಟ್ರೆಂಡಿಂಗ್ ಶುರುವಾಗಿದೆ. ಮಾಲ್ಡೀವ್ಸ್ ಮತ್ತು ಲಕ್ಷದ್ವೀಪಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಯುತ್ತಿದೆ.
ಮಾಲ್ಡೀವ್ಸ್ನ ಆರ್ಥಿಕತೆ, ಮೀನುಗಾರಿಕೆ ಮತ್ತು ಪ್ರವಾಸೋದ್ಯಮವನ್ನು ಅವಲಂಬಿಸಿದೆ. ಮಾಲ್ಡೀವ್ಸ್ನ ಆರ್ಥಿಕತೆಯಲ್ಲಿ ಪ್ರವಾಸೋದ್ಯಮದ ಪಾಲು ಶೇ.28 ರಷ್ಟಿದ್ದರೆ, ಪ್ರವಾಸೋದ್ಯಮವು ವಿದೇಶಿ ವಿನಿಮಯದಲ್ಲಿ ಶೇ.60 ರಷ್ಟು ಕೊಡುಗೆ ನೀಡುತ್ತದೆ. ಹಿಂದೂ ಮಹಾಸಾಗರದಲ್ಲಿರುವ ಈ ದ್ವೀಪ ರಾಷ್ಟ್ರ ಅತ್ಯಂತ ದೊಡ್ಡ ಹಾಲಿಡೇ ತಾಣ.
ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಸಣ್ಣ ದ್ವೀಪಗಳ ದೇಶದ ಸೌಂದರ್ಯವು ಜನರನ್ನು ಆಕರ್ಷಿಸುತ್ತದೆ. ಸಾಮಾನ್ಯ ಜನರಿಂದ ಹಿಡಿದು ವಿಶೇಷ ಸೆಲೆಬ್ರಿಟಿಗಳು ಕೂಡ ಮಾಲ್ಡೀವ್ಸ್ಗೆ ರಜೆಗಾಗಿ ಬರುತ್ತಾರೆ.
ಅಂಕಿ-ಅಂಶಗಳ ಪ್ರಕಾರ ಮಾಲ್ಡೀವ್ಸ್ಗೆ ಬರುವ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಭಾರತೀಯರು. 2023ರಲ್ಲಿ 2,09,198 ಭಾರತೀಯ ಪ್ರವಾಸಿಗರು ಮಾಲ್ಡೀವ್ಸ್ ತಲುಪಿದ್ದಾರೆ. 2022 ರಲ್ಲಿ 2,40,000 ಭಾರತೀಯ ಪ್ರವಾಸಿಗರು ಮಾಲ್ಡೀವ್ಸ್ಗೆ ಭೇಟಿ ನೀಡಿದ್ದರು.
ಇದು ಮಾಲ್ಡೀವ್ಸ್ನ ಮಾರುಕಟ್ಟೆ ಪಾಲಿನ 14 ಪ್ರತಿಶತವಾಗಿತ್ತು. ಭಾರತ ಬಿಟ್ಟರೆ ರಷ್ಯಾ ಮತ್ತು ಚೀನಾದ ಪ್ರವಾಸಿಗರು ಅಲ್ಲಿಗೆ ಬರುತ್ತಾರೆ. 2020ರಲ್ಲಿ ಕರೋನಾ ಸಮಯದಲ್ಲಿ ಭಾರತವು ಮಾಲ್ಡೀವ್ಸ್ ಪ್ರವಾಸೋದ್ಯಮಕ್ಕೆ 11 ಪ್ರತಿಶತದಷ್ಟು ಕೊಡುಗೆ ನೀಡಿದೆ.
ಅಂಥದ್ರಲ್ಲಿ ಭಾರತೀಯ ಪ್ರವಾಸಿಗರು ಮಾಲ್ಡೀವ್ಸ್ ಬದಲು ಲಕ್ಷದ್ವೀಪಕ್ಕೆ ಬರಲು ಆರಂಭಿಸಿದರೆ ಭಾರೀ ನಷ್ಟ ಖಚಿತ. ಹಾಗಾಗಿ ಲಕ್ಷದ್ವೀಪಕ್ಕೆ ಭೇಟಿ ನೀಡುವಂತೆ ಪ್ರಧಾನಿ ಮೋದಿ ಜನರಿಗೆ ಆಹ್ವಾನ ನೀಡಿರೋದು ಮಾಲ್ಡೀವ್ಸ್ಗೆ ತಲೆನೋವಾಗಿದೆ. ಪ್ರಧಾನಿ ಮೋದಿಯವರ ಈ ಉಪಕ್ರಮವು ಮಾಲ್ಡೀವ್ಸ್ನ ಆರ್ಥಿಕತೆಗೆ ನೇರ ಹೊಡೆತ ಕೊಡಲಿದೆ. ಇತರ ದೇಶಗಳ ಪ್ರವಾಸಿಗರು ಕೂಡ ಮಾಲ್ಡೀವ್ಸ್ ಬಿಟ್ಟು ಲಕ್ಷದ್ವೀಪದ ಕಡೆಗೆ ಮುಖಮಾಡಬಹುದು ಎಂಬ ಆತಂಕವೂ ಇದೆ. ಇದೇ ಕಾರಣಕ್ಕೆ ಮಾಲ್ಡೀವ್ಸ್ ನಾಯಕರು ಪ್ರಧಾನಿ ಮೋದಿಯವರ ಪೋಸ್ಟ್ ಮೇಲೆ ವಿವಾದಾತ್ಮಕ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ.