ಪುಣೆ: ಕೋಲ್ಕತ್ತಾದ ನಂತರ ಪುಣೆ ನಗರ ದೇಶದಲ್ಲೇ ಅತಿ ಹೆಚ್ಚು ಮೊಟ್ಟೆ ಬೆಲೆ ದಾಖಲಿಸಿದೆ. ಉತ್ಪಾದನೆಯಲ್ಲಿ 10-15 ರಷ್ಟು ತೀವ್ರ ಕುಸಿತ ಕಂಡುಬಂದಿರುವುದರಿಂದ ಸಾಮಾನ್ಯಕ್ಕಿಂತ ಹೆಚ್ಚಿನ ದರ ಮುಂದುವರಿಯುತ್ತವೆ ಎಂದು ಉದ್ಯಮ ತಜ್ಞರು ಹೇಳಿದ್ದಾರೆ.
ಕೋಲ್ಕತ್ತಾದ ಸಗಟು ಮಾರುಕಟ್ಟೆಯಲ್ಲಿ ಮೊಟ್ಟೆಗಳ ಬೆಲೆ 6.50 ರೂ. ಆಗಿದೆ. ಇದು ದೇಶದ ಇತರ ನಗರಗಳಿಗಿಂತ ಹೆಚ್ಚು. ಪುಣೆಯಲ್ಲಿ ಪ್ರತಿ ಮೊಟ್ಟೆ ಸಗಟು ಬೆಲೆ 6.44 ರೂ., ನಗರವು ಕಳೆದ ವರ್ಷದಲ್ಲಿ ಕಂಡ ಅತ್ಯಧಿಕ ದರ ಇದಾಗಿದೆ. ಪುಣೆಯಲ್ಲಿ ಮೊಟ್ಟೆಯ ಚಿಲ್ಲರೆ ಬೆಲೆಗಳು ಈಗ 7 ರಿಂದ 7.50 ರೂ. ಆಗಿದೆ.
ಅಹಮದಾಬಾದ್(6.39 ರೂ.), ಸೂರತ್(6.37 ರೂ.), ಮತ್ತು ವೈಜಾಗ್(6.25 ರೂ.) ನಂತಹ ನಗರಗಳಲ್ಲಿ ಸಗಟು ಬೆಲೆಗಳು ಸಾಮಾನ್ಯಕ್ಕಿಂತ ಹೆಚ್ಚಿವೆ.
2023 ರಲ್ಲಿ ಹೆಚ್ಚು ಅವಧಿಯಲ್ಲಿ ಮೊಟ್ಟೆಯ ಬೆಲೆ ಸಗಟು ಮಾರುಕಟ್ಟೆಗಳಲ್ಲಿ 6.10 ರೂ. ಇತ್ತು. ಮೊಟ್ಟೆಯ ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ಬಿಸಿ ತಟ್ಟಿದೆ.