ರಾಜಕುಮಾರ್ ಅಸ್ಕಿ ನಿರ್ದೇಶನದ ಬಹು ನಿರೀಕ್ಷಿತ ‘ರಂಗ ಸಮುದ್ರ’ ಸಿನಿಮಾ ಜನವರಿ 12ರಂದು ಬಿಡುಗಡೆಗೆ ಸಜ್ಜಾಗಿತ್ತು, ಇದೀಗ ದಿನಾಂಕವನ್ನು ಬದಲಾವಣೆ ಮಾಡಲಾಗಿದೆ, ಜನವರಿ 19ಕ್ಕೆ ಈ ಸಿನಿಮಾ ರಾಜ್ಯಾದ್ಯಂತ ತೆರೆ ಕಾಣಲಿದೆ. ಈ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ಈ ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಸೇರಿದಂತೆ ರಂಗಾಯಣ ರಘು, ಸಂಪತ್ ರಾಜ್, ಮೋಹನ್, ದಿವ್ಯ ಗೌಡ, ಉಗ್ರ ಮಂಜು, ಸ್ಕಂದಾ, ಮಿಮಿಕ್ರಿ ಗೋಪಿ, ಸದಾನಂದ, ಪ್ರಥಮ್ ಸೇರಿದಂತೆ ಹಲವರ ತಾರಾ ಬಳಗವಿದೆ. ಹೊಯ್ಸಳ ಕೊಣನೂರು ತಮ್ಮ ಹೊಯ್ಸಳ ಕ್ರಿಯೇಷನ್ಸ್ ಬ್ಯಾನರ್ ನಡಿ ನಿರ್ಮಾಣ ಮಾಡಿದ್ದು, ದೇಸಿ ಮೋಹನ್ ಸಂಗೀತ ಸಂಯೋಜನೆ ನೀಡಿದ್ದಾರೆ. ಶ್ರೀಕಾಂತ್ ಸಂಕಲನವಿದ್ದು, ಆರ್ ಗಿರಿ ಛಾಯಾಗ್ರಹಣವಿದೆ.