![](https://kannadadunia.com/wp-content/uploads/2023/01/bigstock-Teacher-hand-writing-grammar-s-86542388-768x512-1.jpg)
ಬೆಂಗಳೂರು : ರಾಜ್ಯ ಸರ್ಕಾರವು ಅತಿಥಿ ಉಪನ್ಯಾಸಕರಿಗೆ ಸಿಹಿಸುದ್ದಿ ನೀಡಿದ್ದು, ಒಂದು ದಿನ ವೇತನ ಸಹಿತ ರಜೆ ಸೇರಿದಂತೆ 3 ತಿಂಗಳ ವೇತನ ಸಹಿತ ಮಾತೃತ್ವ ರಜೆ ಜಾರಿಗೊಳಿಸಲಾಗಿದೆ ಎಂದು ಸಚಿವ ಡಾ. ಎಂ.ಸಿ. ಸುಧಾಕರ್ ಹೇಳಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಅತಿಥಿ ಉಪನ್ಯಾಸಕರ ಬೇಡಿಕೆಗಳಾನುಸಾರವಾಗಿ ಯಾವುದೇ ಕಾನೂನು ತೊಡಕಾಗದಂತೆ ಗೌರವಧನವನ್ನೂ ಸೇವಾ ಅವಧಿ ಆಧಾರದಲ್ಲಿ ಹೆಚ್ಚಿಸುವ ಜೊತೆಗೆ, ಐದು ಲಕ್ಷ ರೂಗಳ ಆರೋಗ್ಯ ವಿಮೆ, ಸೇವೆಯಿಂದ ನಿವೃತ್ತಿಯಾದಾಗ ಭದ್ರತಾ ರೂಪದಲ್ಲಿ 5 ಲಕ್ಷ , ಒಂದು ದಿನ ವೇತನ ಸಹಿತ ರಜೆ ಸೇರಿದಂತೆ 3 ತಿಂಗಳ ವೇತನ ಸಹಿತ ಮಾತೃತ್ವ ರಜೆ ಜಾರಿಗೊಳಿಸಲಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಉಪನ್ಯಾಸಕರ ನೇಮಕಾತಿಯಲ್ಲಿ ಅತಿಥಿ ಉಪನ್ಯಾಸಕರಿಗೆ ಆದ್ಯತೆ ನೀಡುವ ಜೊತೆಗೆ ಅತಿಥಿ ಉಪನ್ಯಾಸಕರಿಗೆ ಖಾಯಂ ಉಪನ್ಯಾಸಕರಿಂದ ತೊಂದರೆಯಾಗದಂತೆ ಕ್ರಮ ಕೈಗೊಂಡಿದ್ದು, ಕೂಡಲೇ ಅತಿಥಿ ಉಪನ್ಯಾಸಕರು ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಪ್ರತಿಭಟನೆ ಹಿಂಪಡೆದು ತರಗತಿಗಳಿಗೆ ಹಾಜರಾಗಲು ಮನವಿ ಮಾಡಲಾಗಿದೆ.