‘ಕರ್ನಾಟಕ ಭಾರತ್ ಗೌರವ್ ದಕ್ಷಿಣ’ ಯೋಜನೆಯಡಿ ಯಾತ್ರಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ 5 ಸಾವಿರ ಸಹಾಯಧನ ಸಿಗಲಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಹಿತಿ ಹಂಚಿಕೊಂಡಿದ್ದಾರೆ.
ಕರ್ನಾಟಕ ಭಾರತ್ ಗೌರವ್ ದಕ್ಷಿಣ ಯಾತ್ರಾ ಯೋಜನೆಯಡಿ ಪ್ರತಿ ಯಾತ್ರಾರ್ಥಿಗೆ ರಾಜ್ಯ ಸರ್ಕಾರದಿಂದ ರೂ.5,000 ಸಹಾಯಧನ ನೀಡಲಾಗುತ್ತಿದೆ.
ಪುಣ್ಯಕ್ಷೇತ್ರಗಳ ದರ್ಶನ ಪಡೆಯಲು ಬಯಸುವವರು ಐಆರ್ಸಿಟಿಸಿ ಅಥವಾ ಐಟಿಎಂಎಸ್ ವೆಬ್ಸೈಟ್ ಮೂಲಕ ಜನವರಿ 18ರಿಂದ ಟಿಕೇಟ್ ಬುಕಿಂಗ್ ಮಾಡಿಕೊಂಡು, ಸರ್ಕಾರದ ಯೋಜನೆಯ ಸದುಪಯೋಗ ಪಡೆಯಿರಿ ಎಂದು ಅವರು ಮಾಹಿತಿ ನೀಡಿದ್ದಾರೆ.