ನವದೆಹಲಿ : ಸ್ಟಾಫ್ ಸೆಲೆಕ್ಷನ್ ಕಮಿಷನ್ ಎಸ್ಎಸ್ಸಿ ಜೂನಿಯರ್ ಎಂಜಿನಿಯರ್ (ಜೆಇ) 2023 ರ ಫಲಿತಾಂಶವನ್ನು ಪ್ರಕಟಿಸಿದೆ. ಜೂನಿಯರ್ ಸಿವಿಲ್ ಎಂಜಿನಿಯರ್, ಜೂನಿಯರ್ ಮೆಕ್ಯಾನಿಕಲ್ ಎಂಜಿನಿಯರ್ ಮತ್ತು ಜೂನಿಯರ್ ಎಲೆಕ್ಟ್ರಿಕಲ್ ಎಂಜಿನಿಯರ್ ನೇಮಕಾತಿ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ssc.nic.in ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ತಮ್ಮ ಅಂತಿಮ ಫಲಿತಾಂಶಗಳನ್ನು ಪ್ರವೇಶಿಸಬಹುದು.
ಒಟ್ಟು 1,374 ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಅರ್ಹತೆ ಪಡೆದಿದ್ದಾರೆ ಮತ್ತು ಈಗ ಮುಂದಿನ ಆಯ್ಕೆ ಪ್ರಕ್ರಿಯೆಗೆ ಹಾಜರಾಗಲು ಅರ್ಹರಾಗಿದ್ದಾರೆ.
ಎಸ್ಎಸ್ಸಿ ಜೆಇ ಫಲಿತಾಂಶ 2023: ಪರಿಶೀಲಿಸಲು ಹಂತಗಳು
ಹಂತ 1: ಮೊದಲಿಗೆ ssc.nic.in ಅಧಿಕೃತ ವೆಬ್ಸೈಟ್ ಗೆ ಹೋಗಿ.
ಹಂತ 2: ನಂತರ ಮುಖಪುಟದಲ್ಲಿ, “ಜೂನಿಯರ್ ಎಂಜಿನಿಯರ್ (ಸಿವಿಲ್, ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಿಕಲ್) ಪರೀಕ್ಷೆ, 2023 – ಅಂತಿಮ ಫಲಿತಾಂಶದ ಘೋಷಣೆ” ಲಿಂಕ್ ಅನ್ನು ಕ್ಲಿಕ್ ಮಾಡಿ.
ಹಂತ 3: ಎಸ್ಎಸ್ಸಿ ಜೆಇ ಫಲಿತಾಂಶಗಳು 2023 ಪಿಡಿಎಫ್ ಪರದೆಯ ಮೇಲೆ ಪ್ರದರ್ಶಿಸಲ್ಪಡುತ್ತದೆ.
ಹಂತ 4: ಪಟ್ಟಿಯಲ್ಲಿ ಹೆಸರು ಮತ್ತು ರೋಲ್ ಸಂಖ್ಯೆಯನ್ನು ಹುಡುಕಲು Ctrl + F ಬಳಸಿ.
ಹಂತ 5: ಫಲಿತಾಂಶ ಪಿಡಿಎಫ್ ಡೌನ್ಲೋಡ್ ಮಾಡಿ ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ಅದರ ಪ್ರಿಂಟ್ ತೆಗೆದುಕೊಳ್ಳಿ.