ಬೆಂಗಳೂರು : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ(KKRTC)ವು ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಜನವರಿ 11ರಂದು ನೇರ ಸಂದರ್ಶನಕ್ಕೆ ಹಾಜರಾಗಬಹುದು.
ಖಾಲಿ ಹುದ್ದೆಗಳು
ಆಟೋ ಮೆಕಾನಿಕ್ 46
ಆಟೋ ಎಲೆಕ್ಟ್ರಿಷಿಯನ್ 28
ಆಟೋ ವೆಲ್ಡರ್ 20
ಆಟೋ ಮೆಷಿನಿಸ್ಟ್ 9
ಆಟೋ ಬಾಡಿ ಫಿಟ್ಟರ್ 20
ಆಟೋ ಪೇಂಟರ್ 10
ಐಟಿಐ ಪಾಸಾದವರು ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಡಿಸೆಂಬರ್ 31, 2023ಕ್ಕೆ ಕನಿಷ್ಠ 18 ವರ್ಷ – ಗರಿಷ್ಠ 40 ವರ್ಷದೊಳಗಿರಬೇಕು. ದೈಹಿಕ ಸಾಮರ್ಥ್ಯ ಪರೀಕ್ಷೆ, ವೈದ್ಯಕೀಯ ಪ್ರಮಾಣಪತ್ರ, ಮೆರಿಟ್ ಪಟ್ಟಿಯ ಮೂಲಕ ಅಭ್ಯರ್ಥಿಗಳನ್ನು ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ kkrtc.karnataka.gov.in ಸಂಪರ್ಕಿಸಬಹುದಾಗಿದೆ.