BIGG UPDATE : ‘ದತ್ತಪೀಠ ಗೋರಿ ಧ್ವಂಸ’ ಕೇಸ್ ರೀ ಓಪನ್ ಸುದ್ದಿ ಸುಳ್ಳು : CM ಸಿದ್ದರಾಮಯ್ಯ ಸ್ಪಷ್ಟನೆ

ಬೆಂಗಳೂರು : ದತ್ತಪೀಠ  ಗೋರಿ ಧ್ವಂಸ   ಕೇಸ್ ರೀ ಓಪನ್ ಸುದ್ದಿ ಸುಳ್ಳು ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ ದತ್ತಪೀಠ ಕೇಸ್ ರೀ ಓಪನ್ ಸುದ್ದಿ ಸುಳ್ಳು, ಅಪ್ಪಟ ತಪ್ಪು ಮಾಹಿತಿ. ಕಾನೂನು ಪ್ರಕ್ರಿಯೆ ಮುಂದುವರೆದ ಭಾಗವಾಗಿ ಸಮನ್ಸ್ ನೀಡಲಾಗಿದೆ. ಜ.8 ರಂದು ಕೋರ್ಟ್ ಗೆ ಹಾಜರಾಗಲು ಸೂಚನೆ ನೀಡಲಾಗಿದೆ ಅಷ್ಟೇ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

2023 ರ ಅಕ್ಟೋಬರ್ 24 ರಂದು ಆರೋಪಿಗಳ ವಿರುದ್ಧ ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ನಂತರ ಈ ಕಾನೂನು ಪ್ರಕ್ರಿಯೆಯ ಮುಂದುವರೆದ ಭಾಗವಾಗಿ ನ್ಯಾಯಾಲಯದಿಂದ ಸಮನ್ಸ್ ಜಾರಿಯಾಗಿದ್ದು ಜನವರಿ 8 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ  ಕೋರ್ಟ್ ನಿಂದಲೇ ಸಮನ್ಸ್ ಜಾರಿಯಾಗಿದೆ ಎಂದು ತಿಳಿಸಿದ್ದಾರೆ.

ದತ್ತಪೀಠ ಹೋರಾಟಗಾರರ ಮೇಲಿದ್ದ ಹಳೇ ಕೇಸ್ ಅನ್ನು ರಾಜ್ಯ ರ್ಕಾರ ರೀ ಓಪನ್ ಮಾಡಿಸಿದೆ ಎಂದು ಹೇಳಲಾಗಿತ್ತು, 2017ರಲ್ಲಿ ಚಿಕ್ಕಮಗಳೂರಿನ ದತ್ತಪೀಠದಲ್ಲಿ ದತ್ತಜಯಂತಿ ವೇಳೆ ಗೋರಿ ಧ್ವಂಸಗೊಳಿಸಲಾಗಿತ್ತು. ಈ ಪ್ರಕರಣದಲ್ಲಿ 14 ಮಂದಿಯ ವಿರುದ್ಧ ದಾಖಲಾಗಿತ್ತು. ಆದರೆ ಈ ಹಿಂದಿನ ಬಿಜೆಪಿ ಸರ್ಕಾರ ಇದನ್ನು ಬಂದ್ ಮಾಡಿತ್ತು, ಇದೀಗ ಕಾಂಗ್ರೆಸ್ ಸರ್ಕಾರ ಹಳೇ ಕೇಸ್ ನ್ನು ರಾಜ್ಯ ಸರ್ಕಾರ ರೀ ಓಪನ್ ಮಾಡಿದೆ ಎಂದು ಹೇಳಲಾಗಿತ್ತು. ಈ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read