ಡಿಜಿಟಲ್ ಮುದ್ರಣ ಮತ್ತು ಡಾಕ್ಯುಮೆಂಟ್ ಮ್ಯಾನೇಜ್ಮೆಂಟ್ ತಂತ್ರಜ್ಞಾನಗಳಿಗೆ ಹೆಸರುವಾಸಿಯಾದ ಯುಎಸ್ ಸಂಸ್ಥೆ ಜೆರಾಕ್ಸ್, ತನ್ನ ಉದ್ಯೋಗಿಗಳಿಗೆ ಬಿಗ್ ಶಾಕ್ ನೀಡಿದೆ.
ಹೊಸ ಕಾರ್ಯನಿರ್ವಾಹಕರ ನೇಮಕದೊಂದಿಗೆ ಕಂಪನಿಯು ನಾಯಕತ್ವ ಪುನರ್ರಚನೆಗೆ ಒಳಗಾಗಲು ಸಜ್ಜಾಗಿದೆ. ಹಿಂದಿನ ವರ್ಷದ ಅಂತ್ಯದ ವೇಳೆಗೆ, ಜೆರಾಕ್ಸ್ ಸುಮಾರು 20,500 ವ್ಯಕ್ತಿಗಳನ್ನು ನೇಮಿಸಿಕೊಂಡಿತು. ಇದೀಗ 3000 ಸಾವಿರ ಉದ್ಯೋಗಿಗಳನ್ನು ವಜಾ ಮಾಡಲು ನಿರ್ಧರಿಸಿದೆ.
ಕಂಪನಿಯ ಪುನರ್ರಚನೆ ಕಾರ್ಯತಂತ್ರವು ಅದರ ಪ್ರಮುಖ ಮುದ್ರಣ ವ್ಯವಹಾರ ಉತ್ಪನ್ನಗಳನ್ನು ಸುವ್ಯವಸ್ಥಿತಗೊಳಿಸುವುದು, ಜಾಗತಿಕ ವ್ಯವಹಾರ ಸೇವೆಗಳಲ್ಲಿ ದಕ್ಷತೆಯನ್ನು ಹೆಚ್ಚಿಸುವುದು ಮತ್ತು ಐಟಿ ಮತ್ತು ಇತರ ಡಿಜಿಟಲ್ ಸೇವೆಗಳ ಮೇಲೆ ಅದರ ಗಮನವನ್ನು ಹೆಚ್ಚಿಸುವುದನ್ನು ಒಳಗೊಂಡಿದೆ ಎನ್ನಲಾಗಿದೆ.