ಪ್ರತಿ ವರ್ಷ ‘ಎಲೆಕ್ಷನ್’ ಬಂದಾಗ ಜನರು ತಮ್ಮ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿದೆಯೇ ಎಂಬುದನ್ನು ಚೆಕ್ ಮಾಡುತ್ತಾರೆ. ಎಲೆಕ್ಷನ್ ಸಮಯದಲ್ಲಿ ಚುನಾವಣಾ ಕಚೇರಿಗೆ ಹೋಗುವ ಬದಲು ಆನ್ಲೈನ್ನಲ್ಲಿ ಅಥವಾ ನಿಮ್ಮ ಫೋನ್ ಮೂಲಕ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂಬುದನ್ನು ಚೆಕ್ ಮಾಡಬಹುದು.
ಚೆಕ್ ಮಾಡೋದು ಹೇಗೆ ತಿಳಿಯಿರಿ
1) ಮೊದಲು https://voters.eci.gov.in/ ಲಿಂಕ್ ಕ್ಲಿಕ್ ಮಾಡಿ ಪೋರ್ಟಲ್ ಗೆ ಹೋಗಿ
2)ನಂತರ ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿ ನಂತರ ಜಿಲ್ಲೆಯ ಹೆಸರನ್ನು ಸೆಲೆಕ್ಟ್ ಮಾಡಿ, ಇದಾದ ಬಳಿಕ ನಿಮ್ಮ ವಿಧಾನಕ್ಷೇತ್ರ ಕ್ಷೇತ್ರ ಯಾವುದು ಅಂತ ಸೆಲೆಕ್ಟ್ ಮಾಡಿ
3)ನಂತರ ನಿಮ್ಮ ಭಾಷೆಯನ್ನು ಸೆಲೆಕ್ಟ್ ಮಾಡಿ ಕೊಟ್ಟಿರುವ ಕ್ಯಾಪ್ಚವನ್ನು ಸರಿಯಾಗಿ ಎಂಟ್ರಿ ಮಾಡಿ.
4)ನಂತರ ಸರ್ಚ್ ಬಾಕ್ಸ್ ಗೆ ಹೋಗಿ ಗ್ರಾಮ ಪಂಚಾಯಿತಿ ಹೆಸರನ್ನು ಟೈಪ್ ಮಾಡಿ ಆಗ ನಿಮ್ಮ ಗ್ರಾಮ ಪಂಚಾಯಿತಿ
5)ಎಲ್ಲಾ ವಾರ್ಡ್ ಗಳ ಆಪ್ಷನ್ ಬರುತ್ತದೆ, ನಂತರ ಅಲ್ಲಿ ನಿಮ್ಮ ವಾರ್ಡ್ ನ ಪಿಡಿಎಫ್ ಡೌನ್ ಲೋಡ್ ಮಾಡಿಕೊಂಡು ನಿಮ್ಮ ಹೆಸರು ಉಂಟಾ ಇಲ್ಲವಾ ಎಂಬುದನ್ನು ಚೆಕ್ ಮಾಡಿಕೊಳ್ಳಿ.
ವೋಟರ್ ಐಡಿ ಒಂದು ಗುರುತಿನ ಚೀಟಿಯಾಗಿದ್ದು, ಪ್ರತಿಯೊಬ್ಬರೂ ಕೂಡ 18 ವರ್ಷ ಆದ ಮೇಲೆ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿಕೊಂಡು ಈ ಗುರುತಿನ ಚೀಟಿಯನ್ನು ಪಡೆಯಬೇಕು. ನಮ್ಮ ಹಕ್ಕು ಮತದಾನ ಮಾಡಲು ವೋಟರ್ ಐಡಿ ಬಹುಮುಖ್ಯ ಗುರುತಿನ ಚೀಟಿಯಾಗಿದೆ.