ಸಚಿವೆ ‘ಲಕ್ಷ್ಮೀ ಹೆಬ್ಬಾಳ್ಕರ್’ ಗೂ ಬಂತು ‘ರಾಮ ಮಂದಿರ ಉದ್ಘಾಟನೆ’ ಆಮಂತ್ರಣ

ಬೆಳಗಾವಿ : ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗುತ್ತಿದ್ದು, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಇದೀಗ ಆಮಂತ್ರಣ ಬಂದಿದೆ.

ಪ್ರತಿಪಕ್ಷಗಳ ನಾಯಕರಿಗೆ ರಾಮ ಮಂದಿರ ಉದ್ಘಾಟನೆಯ ಆಮಂತ್ರಣ ನೀಡಲಾಗುತ್ತಿಲ್ಲ ಎಂಬ ಕಾಂಗ್ರೆಸ್ ನಾಯಕರ ಆರೋಪಗಳ ನಡುವೆಯೇ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಆಮಂತ್ರಣ ನೀಡಲಾಗಿದೆ, ವಿಶ್ವ ಹಿಂದೂ ಪರಿಷತ್ ಪ್ರಮುಖರು ಹೆಬ್ಬಾಳ್ಕರ್ ಅವರ ಮನೆಗೆ ತೆರಳಿ, ಕಾರ್ಯಕ್ರಮಕ್ಕೆ ಆಮಂತ್ರಣ ನೀಡಿದ್ದಾರೆ.

ರಾಮ ಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯು ಅತ್ಯಂತ ಮಹತ್ವಪೂರ್ಣ ಕ್ಷಣವಾಗಿದ್ದು, ಈಗಾಗಲೇ ಈ ಕಾರ್ಯಕ್ರಮಕ್ಕೆ ಭರದಿಂದ ಸಿದ್ಧತೆಗಳು ನಡೆಯ ತೊಡಗಿವೆ. 2024 ರ ಜನವರಿ 15 ರಿಂದ ಜನವರಿ 22 ರವರೆಗೆ ವಿವಿಧ ರೀತಿಯ ಆಚರಣೆಗಳು ನಡೆಯುತ್ತವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read