![](https://kannadadunia.com/wp-content/uploads/2019/04/Umesh-Jadhav-DH-1550310413.jpg)
ಬೆಂಗಳೂರು : ಬೆಂಗಳೂರಿನ ಬಿಜೆಪಿ ಕಚೇರಿಗೆ ಆಗಮಿಸಿದ್ದ ಸಂಸದ ಉಮೇಶ್ ಜಾಧವ್ ಅವರು ಅರ್ಧ ಗಂಟೆಗಳ ಲಿಫ್ಟ್ ನಲ್ಲಿ ಸಿಲುಕಿಕೊಂಡಿದ್ದ ಘಟನೆ ನಡೆದಿದೆ.
ಇಂದು ಬೆಂಗಳೂರಿನ ಬಿಜೆಪಿ ಕಚೇರಿಗೆ ಆಗಮಿಸಿದ್ದ ಸಂಸದ ಉಮೇಶ್ ಜಾಧವ್ ಹಾಗೂ ಇತರ ಮೂವರು ಲಿಫ್ಟ್ ನಲ್ಲಿ ಸಿಲುಕೊಂಡಿದ್ದ ಘಟನೆ ನಡೆದಿದೆ. ಲಿಫ್ಟ್ ನಲ್ಲಿ ಹೋಗುತ್ತಿದ್ದ ವೇಳೆ ಕರೆಂಟ್ ಕೈಗೊಟ್ಟ ಹಿನ್ನೆಲೆಯಲ್ಲಿ ಜಾಧವ್ ಹಾಗೂ ಇತರ ಮೂವರು ಅರ್ಧದಲ್ಲೇ ಕೆಟ್ಟು ನಿಂತ ಪರಿಣಾಮ ಅರ್ಧ ಗಂಟೆಗೂ ಹೆಚ್ಚು ಕಾಲ ಲಿಫ್ಟ್ ನಲ್ಲೇ ಸಿಲುಕಿಕೊಂಡಿದ್ದರು.
ಕೂಡಲೇ ಲಿಫ್ಟ್ ಟೆಕ್ನಿಷಿಯನ್ ಸ್ಥಳಕ್ಕೆ ಆಗಮಿಸಿ ಹರಸಾಹಸ ಪಟ್ಟು ಜಾಧವ್ ಹಾಗೂ ಇತರ ಮೂವರನ್ನು ನೆಲಮಳಿಗೆಯಿಂದ ಹೊರಗೆ ಕರೆದುಕೊಂಡಿದ್ದಾರೆ. ವಿದ್ಯುತ್ ಬಂದ್ರೂ ಸಹ ಲಿಫ್ಟ್ ಸರಿಯಾಗಿಲ್ಲ. ಸದ್ಯ ಲಿಫ್ಟ್ ಟೆಕ್ನಿಷಿಯನ್ ಗಳು ಲಿಫ್ಟ್ ಅನ್ನು ಸರಿಪಡಿಸುತ್ತಿದ್ದಾರೆ.