ಬೂಟಿನಲ್ಲಿ ಥಮ್ಸ್ ಅಪ್ ಸುರಿದು ಕುಡಿದ ಜೋಡಿ! ವೈರಲ್ ವಿಡಿಯೋಗೆ ನೆಟ್ಟಿಗರ ಆಕ್ರೋಶ

ನವದೆಹಲಿ: ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸುವಾಗ ಜೋಡಿಯೊಂದು ಥಮ್ಸ್‌ ಅಪ್‌ ಅನ್ನು ಬೂಟಿನಲ್ಲಿ ಸುರಿದುಕೊಂಡು ಕುಡಿದಿರುವ ವಿಡಿಯೋ ವೈರಲ್‌ ಆಗಿದೆ.

ದೆಹಲಿ ಮೆಟ್ರೋ, ವೇದ್ ವ್ಯಾನ್ ಪಾರ್ಕ್ ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಈ ಜೋಡಿ ಶೂಗೆ  ಥಮ್ಸ್‌ ಅಪ್‌ ಸುರಿದು ಕುಡಿದಿದ್ದಾರೆ. ವೈರಲ್‌ ಆಗಿರುವ ವಿಡಿಯೋದಲ್ಲಿ ಯುವಕ-ಯುವತಿಯರಿಬ್ಬರು ಥಮ್ಸ್‌ ಅಪ್‌ ಅನ್ನು ಯುವಕನ ಶೂಗೆ ಸುರಿದು ನಂತರ ಸ್ಟ್ರಾ ಬಳಸಿ ಕುಡಿದಿದ್ದಾರೆ. ಇದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದ್ದು, ರಿಲ್ಯಾಕ್ಸೊದ 150 ರೂ.ಗಳ ಚಪ್ಪಲಿಯನ್ನು ಈ ಜನರಿಗಾಗಿ ಮಾತ್ರ ತಯಾರಿಸಲಾಗಿದೆ ಎಂದು ವೀಡಿಯೊಗೆ ಶೀರ್ಷಿಕೆ ನೀಡಲಾಗಿದೆ.

https://twitter.com/i/status/1742413153005195758

ಈ ವಿಡಿಯೋ ನೆಟ್ಟಿಗರನ್ನು ಅಸಹ್ಯಗೊಳಿಸಿದೆ. ಒಬ್ಬ ಬಳಕೆದಾರರು ವಿಡಿಯೋ ರೀಲ್ಸ್‌ ಗಾಗಿ ಜನರು ಏನು ಬೇಕಾದ್ರೂ ಮಾಡುತ್ತಾರೆ ಅನ್ನೋದಕ್ಕೆ ಇದು ಉತ್ತಮ ಉದಾಹರಣೆ ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read