alex Certify ಅಲ್ಪಸಂಖ್ಯಾತ ಸಮುದಾಯದವರಿಗೆ ಗುಡ್ ನ್ಯೂಸ್ : BSF, CISF, ಪೊಲೀಸ್, ಅಬಕಾರಿ ನೇಮಕಾತಿಗೆ ದೈಹಿಕ ಕೌಶಲ್ಯ ತರಬೇತಿಗೆ ಅರ್ಜಿ ಸಲ್ಲಿಸಲು ನಾಳೆಯೇ ಲಾಸ್ಟ್‌ ಡೇಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಲ್ಪಸಂಖ್ಯಾತ ಸಮುದಾಯದವರಿಗೆ ಗುಡ್ ನ್ಯೂಸ್ : BSF, CISF, ಪೊಲೀಸ್, ಅಬಕಾರಿ ನೇಮಕಾತಿಗೆ ದೈಹಿಕ ಕೌಶಲ್ಯ ತರಬೇತಿಗೆ ಅರ್ಜಿ ಸಲ್ಲಿಸಲು ನಾಳೆಯೇ ಲಾಸ್ಟ್‌ ಡೇಟ್

ಬೆಂಗಳೂರು : ಅಲ್ಪಸಂಖ್ಯಾತ ಸಮುದಾಯದ ಯುವಕರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ರಾಮನಗರ, ಬೆಳಗಾವಿ ದಾವಣಗೆರೆ, ಕಲಬುರುಗಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಅಭ್ಯರ್ಥಿಗಳಿಗೆ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ರಕ್ಷಣಾ/ ಏಕರೂಪದ ಸೇವೆಗಳಿಗೆ ಪೂರ್ವ ನೇಮಕಾತಿ ದೈಹಿಕ ಕೌಶಲ್ಯದ ಕುರಿತಾದ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ 2023-24ನೇ ಸಾಲಿನಲ್ಲಿ ಅಲ್ಪ ಸಂಖ್ಯಾತರ ಸಮುದಾಯದ (ಮುಸ್ಲಿಮ್, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ) ರಾಮನಗರ, ಬೆಳಗಾವಿ ದಾವಣಗೆರೆ, ಕಲಬುರುಗಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಅಭ್ಯರ್ಥಿಗಳಿಗೆ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ರಕ್ಷಣಾ/ ಏಕರೂಪದ ಸೇವೆಗಳಿಗೆ ಪೂರ್ವ ನೇಮಕಾತಿ ದೈಹಿಕ ಕೌಶಲ್ಯದ ಕುರಿತಾದ ತರಬೇತಿ ನೀಡಲಾಗುತ್ತಿದೆ. ಇದಕ್ಕಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ಭಾರತೀಯ ಸೇನೆ, ವಾಯುಪಡೆ, ನೌಕಾಪಡೆ, ಸಿಐಎಸ್‌ಎಫ್, ಬಿಎಸ್ ಎಫ್, ಆರ್‌ಪಿಎಫ್‌, ಪೊಲೀಸ್, ಅಬಕಾರಿ ಇತ್ಯಾದಿ ರಕ್ಷಣಾ/ ಏಕರೂಪದ ಸೇವೆಗಳಿಗೆ 60ದಿನಗಳ ಪೂರ್ವ ನೇಮಕಾತಿ ದೈಹಿಕ ಕಾಶಲ್ಯದ ತರಬೇತಿ ಇದಾಗಿರುತ್ತದೆ. ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯು ಕುಟುಂಬದ ವಾರ್ಷಿಕ ಆದಾಯ 8 ಲಕ್ಷ ರೂ. ಮೀರಿರಬಾರದು. ತರಬೇತಿ ಅವಧಿಯಲ್ಲಿ ಊಟ ಮತ್ತು ವಸತಿ ಸೌಲಭ್ಯ ಇರಲಿದೆ. www.dom.karnataka.gov.in ವೆಬ್‌ಸೈಟ್ ಮೂಲಕ ಜ.5ರೊಳಗೆ ಅರ್ಜಿ ಸಲ್ಲಿಸಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...