ನವದೆಹಲಿ: ಸುಧಾರಿತ ಬೆಳೆ ವ್ಯಾಪ್ತಿ ಮತ್ತು ಸಾಮಾನ್ಯ ಹವಾಮಾನದ ಬೆಂಬಲದೊಂದಿಗೆ 2023-24ರ ಬೆಳೆ ವರ್ಷದಲ್ಲಿ ಭಾರತದ ಗೋಧಿ ಉತ್ಪಾದನೆ ಹೊಸ ದಾಖಲೆಯ 114 ಮಿಲಿಯನ್ ಟನ್ಗಳಿಗೆ ಏರುವ ನಿರೀಕ್ಷೆಯಿದೆ ಎಂದು ಭಾರತೀಯ ಆಹಾರ ನಿಗಮದ ಅಧ್ಯಕ್ಷ ಮತ್ತು ಎಂಡಿ ಅಶೋಕ್ ಕೆ ಮೀನಾ ಹೇಳಿದ್ದಾರೆ.
2024 ರ ಜನವರಿ 8 ರ ವಾರದ ಅಂತ್ಯದ ವೇಳೆಗೆ ರಬಿ ಋತುವಿನ ಬಿತ್ತನೆ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ. ಡಿಸೆಂಬರ್ 25 ರ ವಾರದ ಹೊತ್ತಿಗೆ, ಸುಮಾರು 320.54 ಲಕ್ಷ ಹೆಕ್ಟೇರ್ ಗೋಧಿಯನ್ನು ಬಿತ್ತನೆ ಮಾಡಲಾಗಿದೆ. 2022-23ರ ಬೆಳೆ ವರ್ಷದಲ್ಲಿ ಗೋಧಿ ಉತ್ಪಾದನೆ 110.55 ಮಿಲಿಯನ್ ಟನ್ ಆಗಿದ್ದು, ಹಿಂದಿನ ವರ್ಷದ ಅವಧಿಯಲ್ಲಿ 107.7 ಮಿಲಿಯನ್ ಟನ್ ಗಳಿಂದ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.
ಗೋಧಿ ಎಂಎಸ್ಪಿ ಕಳೆದ ವರ್ಷಕ್ಕಿಂತ ಶೇಕಡಾ 7 ರಷ್ಟು ಹೆಚ್ಚಾಗಿರುವುದರಿಂದ, ಬಹಳಷ್ಟು ರೈತರು ತಮ್ಮ ಉತ್ಪನ್ನಗಳನ್ನು ಎಫ್ಸಿಐಗೆ ನೀಡಲು ಸಿದ್ಧರಿರುತ್ತಾರೆ ಎಂದು ನಾವು ಭಾವಿಸುತ್ತೇವೆ. ಇಲ್ಲಿಯವರೆಗೆ, ಎಫ್ ಸಿಐ 5.9 ಮಿಲಿಯನ್ ಟನ್ ಗೋಧಿಯನ್ನು ಮುಕ್ತ ಮಾರುಕಟ್ಟೆಯ ಮೂಲಕ ಸಾಪ್ತಾಹಿಕ ಹರಾಜಿನ ಮೂಲಕ ಮಾರಾಟ ಮಾಡಿದೆ ಎಂದು ಮೀನಾ ಹೇಳಿದ್ದಾರೆ.