ಮುಂಬೈ : ವಿಶ್ವದ ನಂ.1 ಟಿ20 ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್, ಜಿಂಬಾಬ್ವೆಯ ಸಿಕಂದರ್ ರಾಜಾ, ಉಗಾಂಡಾದ ಅಲ್ಪೇಶ್ ರಾಮ್ಜಾನಿ ಮತ್ತು ನ್ಯೂಜಿಲೆಂಡ್ನ ಮಾರ್ಕ್ ಚಾಪ್ಮನ್ ಐಸಿಸಿ ಪುರುಷರ ಟಿ 20 ಐ ಕ್ರಿಕೆಟಿಗ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.
2023 ರ ಆರಂಭದಲ್ಲಿ ಶ್ರೀಲಂಕಾ ವಿರುದ್ಧದ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 7 ರನ್ ಗೋಂದಿಗೆ ನಿಧಾನಗತಿಯ ಆರಂಭ ಪಡೆದು ನಂತರದ ಪಂದ್ಯಗಳಲ್ಲಿ ಕ್ರಮವಾಗಿ 51 (36) ಮತ್ತು ಅಜೇಯ 112* (51) ಸ್ಕೋರ್ಗಳೊಂದಿಗೆ ತಮ್ಮ ಪರಾಕ್ರಮವನ್ನು ಪ್ರದರ್ಶಿಸಿದರು.
ವರ್ಷದುದ್ದಕ್ಕೂ, 20 ರಿಂದ 40 ರ ಸ್ಟ್ರೇಕ್ ರೇಟ್ ನಲ್ಲಿ ಸ್ಥಿರವಾದ ಸ್ಕೋರ್ ಮಾಡಿರುವ ಸೂರ್ಯಕುಮಾರ್ ಯಾದವ್, ವೆಸ್ಟ್ ಇಂಡೀಸ್ ವಿರುದ್ಧ 83 (44) ರನ್ ಗಳಿಸಿದ್ರೆ ಫ್ಲೋರಿಡಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ 61 (45) ರನ್ ಗಳಿಸಿದರು. ಜೋಹಾನ್ಸ್ ಬರ್ಗ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೇವಲ 56 ಎಸೆತಗಳಲ್ಲಿ 100 ರನ್ ಗಳಿದ್ದರು. ಆಸ್ಟ್ರೇಲಿಯಾ (42 ಎಸೆತಗಳಲ್ಲಿ 80 ರನ್) ಮತ್ತು ದಕ್ಷಿಣ ಆಫ್ರಿಕಾ (36 ಎಸೆತಗಳಲ್ಲಿ 56 ರನ್) ವಿರುದ್ಧ ಭರ್ಜರಿ ಅರ್ಧಶತಕ ಸಿಡಿಸಿದ್ದರು. ಸೂರ್ಯಕುಮಾರ್ ಯಾದವ್ ವರ್ಷದ ಕೊನೆಯಲ್ಲಿ ಯುವ ತಂಡವನ್ನು ಮುನ್ನಡೆಸುವಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.
https://twitter.com/ICC/status/1742509260397834339?ref_src=twsrc%5Etfw%7Ctwcamp%5Etweetembed%7Ctwterm%5E1742509260397834339%7Ctwgr%5E5917e6b813b4e638619e38bdb34363c4faa05827%7Ctwcon%5Es1_c10&ref_url=https%3A%2F%2Fapi-news.dailyhunt.in%2F