BIG NEWS : ಹೊಸ ವರ್ಷಕ್ಕೆ ‘ಮದ್ಯ’ ಪ್ರಿಯರಿಗೆ ಬಿಗ್ ಶಾಕ್ : ರಾಜ್ಯಾದ್ಯಂತ ‘ಎಣ್ಣೆ’ ದರ ಹೆಚ್ಚಳ..!

ಬೆಂಗಳೂರು :   ಹೊಸ ವರ್ಷಕ್ಕೆ ‘ಮದ್ಯ’ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದ್ದು,  ರಾಜ್ಯಾದ್ಯಂತ ‘ಎಣ್ಣೆ’ ದರ ಹೆಚ್ಚಳವಾಗಿದೆ ಎಂದು ತಿಳಿದು ಬಂದಿದೆ.

ಮದ್ಯದ   ಮೂರು ಬ್ರಾಂಡ್ ಗಳ ಬೆಲೆ ಏರಿಕೆಯಾಗಿದ್ದು,  ಮದ್ಯದ ಕಂಪನಿಗಳು ಕ್ವಾಟರ್ ಗೆ 20-30 ರೂ ಏರಿಕೆ ಮಾಡಿದೆ ಎಂದು ತಿಳಿದು ಬಂದಿದೆ. ಕಂಪನಿಗಳ ಉತ್ಪಾದನಾ ವೆಚ್ಚ, ಸರಕು ಸಾಗಣೆ ವೆಚ್ಚಗಳು ಹೆಚ್ಚಾಗಿರುವ ಕಾರಣ ದರ ಏರಿಕೆ ಅಗತ್ಯವಾಗಿದ್ದು, ಮದ್ಯದ ಕಂಪನಿಗಳು ಬೆಲೆ ಏರಿಕೆ ಮಾಡಿದೆ.

1) ಬ್ರಾಂಡ್- 1 (180 ಎಂಎಲ್): ಈ ಹಿಂದೆ 90 ರೂಪಾಯಿ, ಜನವರಿ 2 ರಿಂದ 111 ರೂಪಾಯಿ.

2)ಬ್ರಾಂಡ್ – 2 (180 ಎಂಎಲ್): ಹಿಂದೆ 110 ರೂಪಾಯಿ, ಇಂದಿನಿಂದ- 145 ರೂಪಾಯಿ.

3) ಬ್ರಾಂಡ್ – 3 (180 ಎಂಎಲ್): ನಿನ್ನೆಯ ದರ 90 ರೂಪಾಯಿ, ಇಂದಿನ ದರ 111 ರೂಪಾಯಿ

ಹೊಸ ವರ್ಷಾಚರಣೆ ಹಿನ್ನೆಲೆ   ಕರ್ನಾಟಕದಲ್ಲಿ ‘ಮದ್ಯ’ ಸೇವನೆ ಹೆಚ್ಚಳವಾಗಿದ್ದು, ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಭರ್ಜರಿ ಆದಾಯ ಹರಿದು ಬಂದಿದೆ. ಹೊಸ ವರ್ಷಾಚರಣೆ ಹಿನ್ನೆಲೆ ರಾಜ್ಯದಲ್ಲಿ ಭರ್ಜರಿ ಮದ್ಯ ಮಾರಾಟವಾಗಿದೆ. ವರ್ಷಾಂತ್ಯದ ಕೊನೆಯ ಎರಡೇ ದಿನಗಳಲ್ಲಿ 417 ಕೋಟಿ ಮೌಲ್ಯದ ಮದ್ಯ ಸೇಲ್ ಆಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read