ಜಪಾನ್ ನ ಉತ್ತರ ಭಾಗದಲ್ಲಿ ಸೋಮವಾರ 7.5 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ.
ಜಪಾನ್ ಹವಾಮಾನ ಸಂಸ್ಥೆ ಇಶಿಕಾವಾ, ನಿಗಟಾ ಮತ್ತು ಟೊಯಾಮಾ ಪ್ರಾಂತ್ಯಗಳ ಕರಾವಳಿ ಪ್ರದೇಶಗಳಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಸೋಮವಾರ ಭೂಕಂಪದ ಜೊತೆ ಸುನಾಮಿ ಎಚ್ಚರಿಕೆಗಳನ್ನು ಕೂಡ ನೀಡಲಾಗಿದ್ದು, ಜಪಾನ್ ಸಮುದ್ರದ ಕರಾವಳಿಯ ನಿಗಾಟಾ, ಟೊಯಾಮಾ, ಯಮಗಟಾ, ಫುಕುಯಿ ಮತ್ತು ಹ್ಯೋಗೊ ಪ್ರಾಂತ್ಯಗಳಿಗೆ ಸುನಾಮಿ ಎಚ್ಚರಿಕೆ ನೀಡಲಾಗಿದೆ.