ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದಿರುವ “ವಿಶ್ವಕರ್ಮ ಯೋಜನೆ” ಯಡಿ ನೋಂದಾಯಿಸಿಕೊಳ್ಳುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ಮೋದಿ ಅವರು ಜಾರಿಗೆ ತಂದಿರುವ “ವಿಶ್ವಕರ್ಮ ಯೋಜನೆ” ಶತ ಶತಮಾನಗಳಿಂದಲೂ ಕಾಯಕ ನಡೆಸಿಕೊಂಡು ಬಂದಿರುವ ವೃತ್ತಿ ಆಧಾರಿತ ಕುಶಲಕರ್ಮಿ ಬಂಧುಗಳಿಗೆ ಸ್ವಾವಲಂಬಿ ಬದುಕು ಕಟ್ಟಿಕೊಡುವ ಪರಮ ಗುರಿಯನ್ನು ಹೊಂದಿದೆ. ನಾಡಿನ 18 ಹಿಂದುಳಿದ ವರ್ಗಗಳ ಕುಶಲಕರ್ಮಿಗಳು ಹತ್ತಿರದ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ನೊಂದಾಯಿಸಿಕೊಂಡು, ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ವಿನಂತಿಸುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಟ್ವೀಟ್ ಮಾಡಿದ್ದಾರೆ.