ಅಯೋಧ್ಯ: ರಾಮ ಭಕ್ತರು ಜನವರಿ 22ರ ನಂತರ ಅವರ ಅನುಕೂಲಕ್ಕೆ ತಕ್ಕಂತೆ ಅಯೋಧ್ಯೆಗೆ ಬರಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಅಯೋಧ್ಯೆ ವಿಮಾನ ನಿಲ್ದಾಣ, ಅಯೋಧ್ಯಾ ಧಾಮ್ ಜಂಕ್ಷನ್ ರೈಲು ನಿಲ್ದಾಣ ಮತ್ತು 15,700 ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಅಯೋಧ್ಯೆ ಭೇಟಿ ವೇಳೆ ಮಾತನಾಡಿದ ಅವರು, ಅಯೋಧ್ಯೆಯ ಅಭಿವೃದ್ಧಿಯು ಶೀಘ್ರದಲ್ಲೇ ಇಲ್ಲಿನ ಜನರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ ಎಂದು ಹೇಳಿದ್ದಾರೆ.
ನಾನು ಎಲ್ಲರಿಗೂ ವಿನಂತಿಸುತ್ತೇನೆ. ಜನವರಿ 22 ರಂದು ನಡೆಯುವ ಕಾರ್ಯಕ್ರಮದ ಭಾಗವಾಗಲು ಪ್ರತಿಯೊಬ್ಬರೂ ಅಯೋಧ್ಯೆಗೆ ಬರಲು ಬಯಸುತ್ತಾರೆ. ಆದರೆ ಎಲ್ಲರೂ ಬರಲು ಸಾಧ್ಯವಿಲ್ಲ ಎಂದು ನಿಮಗೆ ತಿಳಿದಿದೆ. ಆದ್ದರಿಂದ, ರಾಮ ಭಕ್ತರಿಗೆ ಮನವಿ ಮಾಡುವುದೇನೆಂದರೆ ಅವರು ತಮ್ಮ ಅನುಕೂಲಕ್ಕೆ ತಕ್ಕಂತೆ ಅಯೋಧ್ಯೆಗೆ ಬರಬೇಕು. ಜನವರಿ 22 ರಂದು ಅಯೋಧ್ಯೆಗೆ ಬರಲು ಮನಸ್ಸು ಮಾಡಬೇಡಿ ಎಂದು ಹೇಳಿದ್ದಾರೆ.
ಇಂದು ಇಡೀ ಜಗತ್ತು ಜನವರಿ 22 ಕ್ಕೆ ಕಾತರದಿಂದ ಕಾಯುತ್ತಿದೆ. ಜ.22 ರಂದು ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರದ ಶಂಕುಸ್ಥಾಪನೆ ಸಮಾರಂಭ ನಡೆಯಲಿದೆ. ಇಂದಿನ ಭಾರತವು ತನ್ನ ಯಾತ್ರಾ ಸ್ಥಳಗಳನ್ನು ಸುಂದರಗೊಳಿಸುತ್ತಿದೆ. ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಅಭಿಯಾನವು ಅಯೋಧ್ಯೆಯಿಂದ ಹೊಸ ವೇಗವನ್ನು ಪಡೆಯುತ್ತಿದೆ ಎಂದು ಹೇಳಿದ್ದಾರೆ.
ಭಾರತದ ಪರಂಪರೆಯು ಸರಿಯಾದ ಮಾರ್ಗವನ್ನು ತೋರಿಸುತ್ತದೆ ಮತ್ತು ಇಂದಿನ ಭಾರತವು ಆಧುನಿಕತೆಯೊಂದಿಗೆ ಸಂಪ್ರದಾಯವನ್ನು ಸಂಯೋಜಿಸುವ ಮೂಲಕ ಪ್ರಗತಿಯನ್ನು ಸಾಧಿಸುತ್ತಿದೆ ಎಂದು ಹೇಳಿದ್ದಾರೆ.