![](https://kannadadunia.com/wp-content/uploads/2023/12/Bapuji-Sevakendra.jpg)
ಬೆಂಗಳೂರು : ಅನುಕಂಪದ ಆಧಾರದ ನೇಮಕಾತಿಗೆ ಅದಾಯ ದೃಢೀಕರಣ ಪತ್ರ ಪಡೆಯುವುದು ಈಗ ಮತ್ತಷ್ಟು ಸುಲಭವಾಗಿದ್ದು, ಬಾಪೂಜಿ ಸೇವಾ ಕೇಂದ್ರಗಳಲಿ ಲಭ್ಯವಿರುವ ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲೂ ಈ ಸೇವೆಗಳು ಲಭ್ಯವಿದೆ.
ಅನುಕಂಪದ ಆಧಾರದ ನೇಮಕಾತಿಗೆ ಆದಾಯ ದೃಢೀಕರಣ ಪತ್ರ ಪಡೆಯಲು ಬೇಕಾಗುವ ದಾಖಲೆಗಳು
ಪಡಿತರ ಚೀಟಿ
ಮತದಾರರ ಗುರುತಿನ ಚೀಟಿ
ಆಧಾರ್ ಕಾರ್ಡ್
ಮರಣ ಪ್ರಮಾಣ ಪತ್ರ
ಮರಣ ಹೊಂದಿರುವವರ ವೇತನ ಪ್ರಮಾಣ ಪತ್ರ
ಪಿಂಚಣಿ ಪ್ರಮಾಣ ಪತ್ರ
ಅರ್ಜಿ ನಮೂನೆಯಲ್ಲಿ ಸ್ವಯಂ ಘೋಷಿತ ಪತ್ರ
ಕಾರ್ಯ ವಿಧಾನ
ಗ್ರಾಮ ಲೆಕ್ಕಿಗರು ಕ್ಷೇತ್ರ ಪರಿಶೀಲನೆ ಮಾಡಿದ ವರದಿಯ ಆಧಾರದ ಮೇಲೆ ಅನುಕಂಪದ ಆಧಾರದ ನೇಮಕಾತಿಗೆ ಆದಾಯ ದೃಢೀಕರಣ ಪತ್ರ ವಿತರಿಸಲಾಗುತ್ತದೆ.