ಬೆಂಗಳೂರು: ಇಂಜಿನಿಯರ್ ಓರ್ವರು ಅಪಾರ್ಟ್ ಮೆಂಟ್ ನಿಂದ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ಬೆಂಗಳೂರಿನ ಕೆ.ಆರ್. ಪುರದಲ್ಲಿ ನಡೆದಿದೆ.
ಕೆ.ಆರ್.ಪುರದ ಅಯ್ಯಪ್ಪನಗರದಲ್ಲಿ ನಿನ್ನೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ದಿಪಾಂಶು ಶರ್ಮಾ ಮೃತ ವ್ಯಕ್ತಿ. ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿದ್ದ ದಿಪಾಂಶು ಶರ್ಮಾ ಅಪಾರ್ಟ್ ಮೆಂಟ್ ನ 33ನೇ ಫ್ಲೋರ್ ನ ಬಾಲ್ಕನಿಯಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ.
ಪಾರ್ಟಿ ಬಳಿಕ ಬಾಲ್ಕನಿಯಲ್ಲಿ ನಿಂತಿದ್ದ ದಿಪಾಂಶು, ಮದ್ಯದ ನಶೆಯಲ್ಲಿ ಆಯತಪ್ಪಿ ಕೆಳಗೆ ಬಿದ್ದು, ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಕೆ.ಆರ್.ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.