ಅಯೋಧ್ಯೆ: ಡಿಸೆಂಬರ್ 30 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕ ರ್ಯಾಲಿ ನಡೆಸಲಿರುವ ಮೈದಾನವನ್ನು ಪರಿಶೀಲಿಸಿದ ನಂತರ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸೆಲ್ಫಿ ತೆಗೆದುಕೊಂಡಿದ್ದಾರೆ.
ಪ್ರಧಾನಿ ಭೇಟಿಗೂ ಮುನ್ನ ಸಿಎಂ ಯೋಗಿ ಅಯೋಧ್ಯೆಯ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದರು. ಇದು ಈ ತಿಂಗಳಲ್ಲಿ ಅಯೋಧ್ಯೆಗೆ ಅವರ ಮೂರನೇ ಭೇಟಿಯಾಗಿದೆ.
ಲತಾ ಮಂಗೇಶ್ಕರ್ ಚೌಕ್ ತಲುಪಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸುಂದರವಾಗಿ ಅಲಂಕೃತವಾದ ಸುತ್ತಮುತ್ತಲಿನ ಪ್ರದೇಶವನ್ನು ಮೆಚ್ಚಿಕೊಂಡರಲ್ಲದೇ, ವೀಣೆಯೊಂದಿಗೆ ಸೆಲ್ಫಿ ತೆಗೆದುಕೊಂಡರು. ಸಾರ್ವಜನಿಕರಿಗೆ ನಮಸ್ಕರಿಸಿ ನಂತರ ರಾಮಪಥ ವೀಕ್ಷಿಸಿದರು.
ರಾಮಪಥಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿಯವರು ಅಲ್ಲಿನ ಮಹಿಳೆಯರು, ವೃದ್ಧರು ಮತ್ತು ಮಕ್ಕಳೊಂದಿಗೆ ಸಂವಾದ ನಡೆಸಿದರು.