ಚೆನ್ನೈ: ದೇಸಿಯ ಮುರ್ಪೊಕ್ಕು ದ್ರಾವಿಡ ಕಳಗಂ(ಡಿಎಂಡಿಕೆ) ನಾಯಕ, ನಟ ವಿಜಯಕಾಂತ್ ಅವರು ಕೊರೋನಾ ಸೋಂಕು ತಗುಲಿದೆ.
ಕೋವಿಡ್ -19 ಧನಾತ್ಮಕ ಪರೀಕ್ಷೆ ನಡೆಸಿದ ನಂತರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಸಿರಾಟದ ಸಮಸ್ಯೆಯಿಂದಾಗಿ ಅವರನ್ನು ವೆಂಟಿಲೇಟರ್ನಲ್ಲಿ ಇರಿಸಲಾಗಿದೆ ಎಂದು ಡಿಎಂಡಿಕೆ ಹೇಳಿಕೆಯಲ್ಲಿ ತಿಳಿಸಿದೆ.
ನವೆಂಬರ್ ನಲ್ಲಿ ಆರೋಗ್ಯ ಹದಗೆಟ್ಟ ನಂತರ ವಿಜಯಕಾಂತ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಈಗ ಸಂಪೂರ್ಣ ಚೇತರಿಸಿಕೊಳ್ಳುತ್ತಾರೆ ಎಂಬ ವಿಶ್ವಾಸದಲ್ಲಿದ್ದೇವೆ. ಇನ್ನೂ ಹದಿನಾಲ್ಕು ದಿನಗಳು ಆಸ್ಪತ್ರೆಯಲ್ಲಿ ಉಳಿಯುವ ಸಾಧ್ಯತೆ ಇದೆ ಎಂದು ಆಸ್ಪತ್ರೆ ತಿಳಿಸಿದೆ.
ಸೆಪ್ಟೆಂಬರ್ 2020 ರಲ್ಲಿ ಕೋವಿಡ್ನ ಮೊದಲ ಅಲೆಯ ಸಮಯದಲ್ಲಿ ವಿಜಯಕಾಂತ್ ಗೆ ಕೊರೋನಾ ಸೋಂಕು ತಗುಲಿತ್ತು, ಚೆನ್ನೈನ ಮಿಯೋಟ್ ಇಂಟರ್ನ್ಯಾಶನಲ್ನಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು.