alex Certify ಮುರಿದ ಅಡುಗೆ ಮನೆ ವಸ್ತುಗಳು ಮಿಂಚಿನ ವೇಗದಲ್ಲಿ ರಿಪೇರಿ; ವಿಡಿಯೋ ವೈರಲ್‌ ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುರಿದ ಅಡುಗೆ ಮನೆ ವಸ್ತುಗಳು ಮಿಂಚಿನ ವೇಗದಲ್ಲಿ ರಿಪೇರಿ; ವಿಡಿಯೋ ವೈರಲ್‌ !

ಮನೆಯಲ್ಲಿ ಬಳಸುವ ವಸ್ತುಗಳು ಆಗಾಗ್ಗೆ ಕೆಟ್ಟುಹೋಗುವುದು ಸಾಮಾನ್ಯ. ಮಿಕ್ಸರ್, ಕುಕ್ಕರ್, ಫ್ಯಾನ್, ಫ್ರೈ ಪ್ಯಾನ್ ಸೇರಿದಂತೆ ಅಡುಗೆ ಮನೆಯಲ್ಲಿ ಬಳಸುವ ಹಲವು ವಸ್ತುಗಳು ಕೆಟ್ಟುಹೋಗುತ್ತಿರುತ್ತವೆ. ಅವುಗಳನ್ನು ರಿಪೇರಿ ಮಾಡಿಸಲು ಸಮಯ ಬೇಕಾಗುತ್ತದೆ.

ಆದರೆ ಇಂದು ಕೊಟ್ಟ ವಸ್ತುಗಳನ್ನು ರಿಪೇರಿ ಮಾಡಲು ಎಷ್ಟು ಸಮಯ ತೆಗೆದುಕೊಳ್ಳುತ್ತಾರೋ ? ಮತ್ತೆ ಆ ವಸ್ತುಗಳು ಯಾವಾಗ ಸಿಗುತ್ತವೋ ಎಂಬ ಪ್ರಶ್ನೆಗಳು ಗೃಹಿಣಿಯರನ್ನು ಕಾಡುತ್ತಿರುತ್ತವೆ. ಆದರೆ ನೀವು ಕೊಟ್ಟ ಕೆಲವೇ ಕ್ಷಣಗಳಲ್ಲಿ ಹಾಳಾದ ವಸ್ತುಗಳನ್ನು ರಿಪೇರಿ ಮಾಡುವ ವ್ಯಕ್ತಿಯೊಬ್ಬರಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ಅಡುಗೆ ಮನೆಯಲ್ಲಿ ಹಾಳಾದ ಹಳೆಯ ಪಾತ್ರೆಗಳನ್ನು ಮಿಂಚಿನ ವೇಗದಲ್ಲಿ ರಿಪೇರಿ ಮಾಡುತ್ತಾರೆ. ಕುಕ್ಕರ್ , ಮಿಕ್ಸರ್, ಫ್ರೈ ಪ್ಯಾನ್ ಸೇರಿದಂತೆ ಅಡುಗೆ ಮನೆಯಲ್ಲಿ ಹಾಳಾದ ಯಾವುದೇ ವಸ್ತುಗಳನ್ನು ಮಿಂಚಿನ ವೇಗದಲ್ಲಿ ರಿಪೇರಿ ಮಾಡುವ ಕೌಶಲ್ಯ ಹೊಂದಿದ್ದಾರೆ.

ಮುರಿದ ಪ್ರೆಶರ್ ಕುಕ್ಕರ್ ಮುಚ್ಚಳಗಳನ್ನು ಸರಿಪಡಿಸುವಂತಹ, ಹಾಳಾದ ಮಿಕ್ಸರ್ ಭಾಗಗಳನ್ನು ತೆಗೆದು ಹೊಸ ಭಾಗಗಳನ್ನು ಸೇರಿಸುವಂತಹ ಕೆಲಸದಲ್ಲಿ ಎಲೆಕ್ಟ್ರಾನಿಕ್ ವಸ್ತುಗಳನ್ನೂ ಸಹ ವೇಗವಾಗಿ ಚಾಕಚಕ್ಯತೆಯಿಂದ ಬಳಸುವ ಕೌಶಲ್ಯಕ್ಕೆ ಗ್ರಾಹಕರಷ್ಟೇ ಅಲ್ಲದೇ ನೆಟ್ಟಿಗರೂ ಫಿದಾ ಆಗಿದ್ದಾರೆ

ಇನ್‌ಸ್ಟಾಗ್ರಾಮ್‌ನಲ್ಲಿ ಈ ವೀಡಿಯೊ ಹಂಚಿಕೊಂಡ ಕೂಡಲೇ 121 ಮಿಲಿಯನ್ ವೀಕ್ಷಣೆ ಪಡೆದಿದೆ. ಕೆಲವರು ಇವರ ಅಂಗಡಿ ಕೇವಲ 1 ಗಂಟೆ ಅವಧಿಗೆ ಮಾತ್ರ ತೆಗೆದಿರುತ್ತದೆ. ಇವರು ಫಾಸ್ಟೆಸ್ಟ್ ಫಿಟ್ಟರ್ ಎಂದೆಲ್ಲಾ ಕಮೆಂಟ್ ಮಾಡಿದ್ದಾರೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...