ಶೀಘ್ರವೇ ಮತ್ತೊಂದು ‘ಪುಲ್ವಾಮಾ ದಾಳಿ’ ನಡೆಯಲಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದ ‘ವಿದ್ಯಾರ್ಥಿ’ ಯನ್ನು ಬಂಧಿಸಲಾಗಿದೆ. ಉತ್ತರ ಪ್ರದೇಶದ ದಾರುಲ್ ಉಲೂಮ್ ದೇವಬಂದ್ ನ ಮುಸ್ಲಿಂ ವಿದ್ಯಾರ್ಥಿಯೊಬ್ಬ ಮತ್ತೊಂದು ಪುಲ್ವಾಮಾ ದಾಳಿಯ ಬೆದರಿಕೆ ಹಾಕಿದ್ದಾನೆ.
ಯುವಕ ತನ್ನ ಎಕ್ಸ್ ಖಾತೆಯಲ್ಲಿ “ಬಹುತ್ ಜಲ್ದ್ ಇನ್ ಶಾ ಅಲ್ಲಾಹ್ ದುಸ್ರಾ ಪುಲ್ವಾಮಾ ಭಿ ಹೋಗಾ” (ಇನ್ಶಾ ಅಲ್ಲಾಹ್, ಶೀಘ್ರದಲ್ಲೇ ಮತ್ತೊಂದು ಪುಲ್ವಾಮಾ ದಾಳಿ ನಡೆಯಲಿದೆ ) ಎಂದು ಬರೆದುಕೊಂಡಿದ್ದಾನೆ. 2019 ರಲ್ಲಿ ನಡೆದ ಪುಲ್ವಾಮಾ ದಾಳಿಯಲ್ಲಿ 40 ಸೈನಿಕರು ಹುತಾತ್ಮರಾಗಿದ್ದರು.ಈತ ಮಾಡಿರುವ ಟ್ವೀಟ್ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ವಿದ್ಯಾರ್ಥಿಯನ್ನು ಜಾರ್ಖಂಡ್ ನ ಜೆಮ್ಷೆಡ್ಪುರದ ಸರೈಕೆಲಾ ನಿವಾಸಿ ಮೊಹಮ್ಮದ್ ತಲ್ಹಾ ಮಝರ್ ಎಂದು ಗುರುತಿಸಲಾಗಿದೆ. ಈತ ದಿಯೋಬಂದ್ ನ ದಾರುಲ್ ಉಲೂಮ್ ಮದರಸಾದ ವಿದ್ಯಾರ್ಥಿಯಾಗಿದ್ದು, ಡಿಸೆಂಬರ್ 26 ರಂದು ರಾತ್ರಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬೆದರಿಕೆ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ. “ಇನ್ಶಾ ಅಲ್ಲಾಹ್, ಶೀಘ್ರದಲ್ಲೇ ಮತ್ತೊಂದು ಪುಲ್ವಾಮಾ ದಾಳಿ ನಡೆಯಲಿದೆ” ಎಂದು ಬರೆದುಕೊಂಡಿದ್ದಾನೆ.
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಎಟಿಎಸ್ (ಭಯೋತ್ಪಾದನಾ ನಿಗ್ರಹ ದಳ) ವಿದ್ಯಾರ್ಥಿಯನ್ನು ಬಂಧಿಸಿದೆ. ಸದ್ಯ, ಈತ ಪೊಲೀಸರ ವಶದಲ್ಲಿದ್ದು, ವಿಚಾರಣೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
https://twitter.com/SachinGuptaUP/status/1739853412022546489?ref_src=twsrc%5Etfw%7Ctwcamp%5Etweetembed%7Ctwterm%5E1739853412022546489%7Ctwgr%5E37a10abed7485b3f71d84bb48ad3138e7f6c9ab5%7Ctwcon%5Es1_&ref_url=https%3A%2F%2Fwww.freepressjournal.in%2Feducation%2Finsha-allah-dusra-pulwama-jald-hoga-darul-uloom-madrasa-student-posts-threatening-message-on-social-media-arrested