
ಹಾವೇರಿ: ನೀರಲ್ಲಿ ಮುಳುಗಿ ಮೃತಪಟ್ಟ ಮಕ್ಕಳ ಮೃತದೇಹಗಳನ್ನು ಉಪ್ಪಿನ ರಾಶಿಯಲ್ಲಿ ಇಟ್ಟ ಘಟನೆ ಹಾವೇರಿಯಲ್ಲಿ ಜಿಲ್ಲೆ ಬ್ಯಾಡಗಿ ತಾಲೂಕಿನ ಗಾಳಪೂಜಿ ಗ್ರಾಮದಲ್ಲಿ ನಡೆದಿದೆ.
ಭಾನುವಾರ ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಹೇಮಂತ್(12), ನಾಗರಾಜ್(11) ಮೃತಪಟ್ಟ ಬಾಲಕರು. ಇವರ ಮೃತ ದೇಹಗಳನ್ನು ನೀರಿನಿಂದ ಹೊರ ತೆಗೆದ ನಂತರ ಪೋಷಕರು ಉಪ್ಪಿನ ರಾಶಿಯಲ್ಲಿ ಆರು ಗಂಟೆಗಳ ಕಾಲ ಇಟ್ಟಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ನೀರಿನಲ್ಲಿ ಮುಳುಗಿ ಮೃತಪಟ್ಟವರ ಮೃತದೇಹಗಳನ್ನು ಉಪ್ಪಿನ ರಾಶಿಯಲ್ಲಿ ನಾಲ್ಕೈದು ಗಂಟೆ ಇಟ್ಟರೆ ಮತ್ತೆ ಬದುಕಿ ಬರುತ್ತಾರೆ ಎನ್ನುವ ವಿಡಿಯೋ ನೋಡಿ ಈ ರೀತಿ ಮಾಡಿದ್ದಾರೆ. ಮಕ್ಕಳಿಗೆ ಜೀವ ಬರುವುದಿಲ್ಲ ಎಂದು ಪೋಷಕರಿಗೆ ಪೊಲೀಸರು ಮನವರಿಕೆ ಮಾಡಿ ಕೊಟ್ಟಿದ್ದಾರೆ. ನಂತರ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.