Viral Video | ಸಹೋದರನ ಮದುವೆಯಲ್ಲಿ ಕುಣಿದು ಸಂಭ್ರಮಿಸಿದ ಸಲ್ಮಾನ್

Salman Khan Dances With Arhaan At Arbaaz Khan And Shura Khan's Wedding | Watch Inside Videos

ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಸೋದರ ಅರ್ಬಾಜ್ ಖಾನ್ ಕಳೆದ ಭಾನುವಾರ ( ಡಿ.24) ದಂದು ಮದುವೆಯಾಗಿದ್ದು ಜೀವನದಲ್ಲಿ ಎರಡನೇ ಇನ್ನಿಂಗ್ಸ್ ಶುರುಮಾಡಿದ್ದಾರೆ.

ಅರ್ಬಾಜ್ ಖಾನ್, ಮೇಕಪ್ ಕಲಾವಿದೆ ಶುರಾ ಖಾನ್ ಅವರನ್ನು ವಿವಾಹವಾದರು. ನವಜೋಡಿ ಸಲ್ಮಾನ್ ಖಾನ್ ಸೋದರಿ ಅರ್ಪಿತಾ ಮತ್ತು ಆಯುಷ್ ಅವರ ನಿವಾಸದಲ್ಲಿ ಮದುವೆಯಾಗಿ ಸಂತೋಷದ ಕ್ಷಣಗಳನ್ನ ಕಳೆದರು. ಈ ಸಮಾರಂಭದಲ್ಲಿ ಅವರ ಹತ್ತಿರದ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಮಾತ್ರ ಹಾಜರಿದ್ದರು.

ಸಲ್ಮಾನ್ ಖಾನ್ ಕೂಡ ಪಾರ್ಟಿಯಲ್ಲಿ ಭಾಗವಹಿಸಿದ್ದು ಮದುವೆಯ ಸಂಭ್ರಮದಲ್ಲಿ ಕುಣಿದಿದ್ದಾರೆ. ‘ತೇರೆ ಮಸ್ತ್ ಮಸ್ತ್ ದೋ ನೈನ್’ ಹಾಡಿಗೆ ನಟ ಸಲ್ಮಾನ್ ಖಾನ್ ಡ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅರ್ಬಾಜ್‌ನ ಮಗ ಅರ್ಹಾನ್, ಅರ್ಬಾಜ್ ಅವರ ಪತ್ನಿ ಶುರಾ ಖಾನ್ ಕೂಡ ಸಲ್ಮಾನ್ ಖಾನ್ ಜೊತೆ ಹೆಜ್ಜೆ ಹಾಕಿದ್ದಾರೆ.

ಸಲ್ಮಾನ್ ಖಾನ್ ಮತ್ತು ಅರ್ಬಾಜ್ ಖಾನ್ ಇಬ್ಬರೂ ನಟಿಸಿದ ‘ದಬಾಂಗ್’ ಚಿತ್ರದ ‘ತೇರೆ ಮಸ್ತ್ ಮಸ್ತ್ ದೋ ನೈನ್’ ಹಾಡು ಪ್ಲೇ ಆಗುತ್ತಿದ್ದರೆ ಮದುವೆ ಸಂಭ್ರಮದಲ್ಲಿದ್ದವರೆಲ್ಲಾ ಹೆಜ್ಜೆ ಹಾಕಿ ಖುಷಿಪಟ್ಟಿದ್ದಾರೆ.

ಡಿಸೆಂಬರ್ 24 ರಂದು ಅರ್ಬಾಜ್ ಖಾನ್, ಶುರಾ ಖಾನ್ ಅವರೊಂದಿಗೆ ತಮ್ಮ ಮದುವೆಯ ಸಂಭ್ರಮದ ಕ್ಷಣಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡರು. “ನಮ್ಮ ಪ್ರೀತಿಪಾತ್ರರ ಸಮ್ಮುಖದಲ್ಲಿ ನಾವು ಹೊಸ ಜೀವನವನ್ನು ಆರಂಭಿಸಿದ್ದೇವೆ. ಈ ದಿನದಿಂದ ಜೀವನಪರ್ಯಂತ ಪ್ರೀತಿ ಮತ್ತು ಒಗ್ಗೂಡಿಸುವಿಕೆಯನ್ನು ಪ್ರಾರಂಭಿಸುತ್ತೇವೆ. ನಮ್ಮ ವಿಶೇಷ ದಿನದಂದು ನಿಮ್ಮೆಲ್ಲರ ಆಶೀರ್ವಾದ ಮತ್ತು ಶುಭ ಹಾರೈಕೆಗಳು ಬೇಕು” ಎಂದು ಪೋಸ್ಟ್ ಮಾಡಿದ್ದಾರೆ.

ಅರ್ಬಾಜ್ ಕೈ ಹಿಡಿದಿರುವ ಶುರಾ ಖಾನ್ ಮೇಕಪ್ ಕಲಾವಿದೆ. ವರದಿಯ ಪ್ರಕಾರ ಅರ್ಬಾಜ್ ಮತ್ತು ಶುರಾ ಅವರ ಮುಂಬರುವ ಚಿತ್ರ ‘ಪಟ್ನಾ ಶುಕ್ಲಾ’ ಸೆಟ್‌ನಲ್ಲಿ ಭೇಟಿಯಾದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read