ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಏಳು ಜನರು ಸಾವನ್ನಪ್ಪಿದ್ದಾರೆ.
ತೆಲಂಗಾಣದ ನಲ್ಗೊಂಡ ಜಿಲ್ಲೆಯ ನಿಡಮನೂರು ಮಂಡಲದ ವೆಂಪಾಡು ಗ್ರಾಮದಲ್ಲಿ ಭಾನುವಾರ ರಾತ್ರಿ ಬೈಕ್ ಪಾದಚಾರಿಗೆ ಡಿಕ್ಕಿ ಹೊಡೆದ ಒಬ್ಬರು ಸಾವನ್ನಪ್ಪಿದ್ದಾರೆ .ಪೆದ್ದವೂರ್ ಮಂಡಲದ ನಿಮ್ಮನಾಯಕ್ ತಾಂಡಾದ ಕೇಶವಲು (28) ಭಾನುವಾರ ರಾತ್ರಿ ಮಿರ್ಯಾಲಗುಡದಿಂದ ಬೈಕಿನಲ್ಲಿ ಪ್ರಯಾಣಿಸುತ್ತಿದ್ದಾಗ ಸೈದುಲು (55) ಎಂಬ ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ತಕ್ಷಣ ಅವರು ಸಾವನ್ನಪ್ಪಿದ್ದಾರೆ.
ಅಪಘಾತದ ಬಗ್ಗೆ ತಿಳಿದ ನಂತರ, ಕೇಶವಲು ಅವರ ಕುಟುಂಬದ ಏಳು ಸದಸ್ಯರು ಸೋಮವಾರ ಮುಂಜಾನೆ ಸ್ಥಳಕ್ಕೆ ಹೊರಟಿದ್ದಾರೆ. ದುರಾದೃಷ್ಟ ಅಂದರೆ ಅವರು ಪ್ರಯಾಣಿಸುತ್ತಿದ್ದ ವಾಹನವು ಕೂಡ ಅಪಘಾತದ ಸ್ಥಳದಿಂದ ಅರ್ಧ ಕಿಲೋಮೀಟರ್ ದೂರದಲ್ಲಿ ತೈಲ ಟ್ಯಾಂಕರ್ ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ರಮಾವತ್ ಗನ್ಯಾ (40), ನಾಗರಾಜು (28), ಪಾಂಡ್ಯ (40) ಮತ್ತು ಬುಜ್ಜಿ (38) ಸ್ಥಳದಲ್ಲೇ ಮೃತಪಟ್ಟರೆ, ಇನ್ನೊಬ್ಬ ವ್ಯಕ್ತಿ ಮಿರ್ಯಾಲಗುಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವನ್ನಪ್ಪಿದ್ದಾರೆ.