ಬೆಂಗಳೂರು: ಕಾಂಗ್ರೆಸ್ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ. ಪ್ರತಿ ಬಾರಿ ಇಂತದ್ದೇ ಎಡವಟ್ಟು ಮಾಡಿ ರೈತರನ್ನು ಅವಮಾನಿಸುತ್ತಿದ್ದಾರೆ. ಸಚಿವ ಶಿವಾನಂದ ಪಾಟೀಲ್ ಮಂತ್ರಿ ಮಂಡಲದಲ್ಲಿ ಇರುವುದು ಬೇಡ ಎಂದು ಬಿಜೆಪಿ ಶಾಸಕ ಸುನೀಲ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಸುನೀಲ್ ಕುಮಾರ್, ಸಚಿವ ಶಿವಾನಂದ ಪಾಟೀಲ್ ಇವರ ಮನೆಯಿಂದ ಹಣ, ತಂದು ರೈತರಿಗೆ ದಾನ, ಧರ್ಮ ಮಡುವ ರೀತಿ ಹೇಳುತ್ತಿದ್ದಾರೆ. ಸಚಿವರ ದುರಹಂಕಾರದ ಹೇಳಿಕೆಯನ್ನು ಖಂಡಿಸುತ್ತೇವೆ ಎಂದು ಕಿಡಿಕಾರಿದರು.
ಈ ಹಿಂದೆಯೂ ಇಂತಹ ಹಗುರವಾದ ಹೇಳಿಕೆಯನ್ನು ಕೊಟ್ಟಿದ್ದರು. ಹಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದಿದ್ದರು. ರೈತರು, ಅನ್ನದಾತರು ಎಲ್ಲರಿಗೂ ಕೊಡುವವರು, ಮೊದಲು ರೈತರನ್ನು ಗೌರವಿಸಬೇಕು. ಶಿವಾನಂದ ಪಾಟೀಲ್ ಸ್ವತಃ ರೈತರಾಗಿ ಇಂತಹ ಹೇಳಿಕೆ ನೀಡಿರುವುದು ದುರದೃಷ್ಟಕರ. ಸಚಿವರು ಮಾನಸಿಕ ಅಸ್ವಸ್ಥರಾಗಿದ್ದಾರೆ. ಮೊದು ಅವರನ್ನು ಸಚಿವ ಸ್ಥನದಿಂದ ವಜಾಮಾಡಬೇಕು ಎಂದು ಆಗ್ರಹಿಸಿದರು.