ಲೈಂಗಿಕ ದೌರ್ಜನ್ಯ ಎಸಗಿದ ಯುವಕನಿಗೆ ಚಾಕುವಿನಿಂದ ಇರಿದು ಕೊಂದು ಬೆಂಕಿ ಹಚ್ಚಿದ ಅಪ್ರಾಪ್ತರು

ನವದೆಹಲಿ: ದೆಹಲಿಯಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಮೂವರು ಅಪ್ರಾಪ್ತರು ಲೈಂಗಿಕ ದೌರ್ಜನ್ಯದ ಸೇಡು ತೀರಿಸಿಕೊಳ್ಳಲು ಯುವಕನಿಗೆ ಚಾಕುವಿನಿಂದ ಇರಿದು ಕೊಂದು ದೇಹಕ್ಕೆ ಬೆಂಕಿ ಹಚ್ಚಿದ್ದಾರೆ.

ಆಗ್ನೇಯ ದೆಹಲಿಯ ಹಜರತ್ ನಿಜಾಮುದ್ದೀನ್ ಪ್ರದೇಶದಲ್ಲಿ ಮೂವರು ಅಪ್ರಾಪ್ತರು 25 ವರ್ಷದ ಯುವಕನನ್ನು ಇರಿದು ಕೊಂದಿದ್ದಾರೆ. ನಂತರ ಮೃತನ ದೇಹಕ್ಕೆ ಒಣ ಹುಲ್ಲು ಮತ್ತು ಬಟ್ಟೆ ಹಾಕಿ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಮೂವರು ಹದಿಹರೆಯದ ಆರೋಪಿಗಳಲ್ಲಿ ಒಬ್ಬನು ಯುವಕನಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾನೆ. ಸೇಡು ತೀರಿಸಿಕೊಳ್ಳಲು ಮೂವರು ಸೇರಿ ಕೃತ್ಯವೆಸಗಿದ್ದಾರೆ. ಡಿಸೆಂಬರ್ 23 ರ ರಾತ್ರಿ ಘಟನೆಯ ಬಗ್ಗೆ ಮಾಹಿತಿ ಬಂದ ನಂತರ ನಾವು 16 ಮತ್ತು 17 ವರ್ಷದೊಳಗಿನ ಮೂವರು ಬಾಲಾಪರಾಧಿಗಳನ್ನು ಬಂಧಿಸಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಯುವಕನ ಇರಿದು ಕೊಂದು ಶವವನ್ನು ಖುಸ್ರೋ ಪಾರ್ಕ್ ಬಳಿ ಸುಡಲಾಗಿತ್ತು. ಆರೋಪಿಗಳನ್ನು ನಿಜಾಮುದ್ದೀನ್ ಬಸ್ತಿ ಪ್ರದೇಶದಿಂದ ಪೊಲೀಸರು ಬಂಧಿಸಿದ್ದಾರೆ. ತಾವೇ ಕೊಲೆ ಮಾಡಿರುವುದಾಗಿ ಅವರು ಒಪ್ಪಿಕೊಂಡಿದ್ದಾರೆ. ನಂತರ ಪೊಲೀಸ್ ತಂಡಗಳು ಬಾಲಾಪರಾಧಿಗಳೊಂದಿಗೆ ಸ್ಥಳಕ್ಕೆ ಬಂದು ಉದ್ಯಾನದಲ್ಲಿ ಅರ್ಧ ಸುಟ್ಟ ಶವ ಪತ್ತೆಯಾಗಿದೆ.

ಮೃತದೇಹವನ್ನು ಶವಪರೀಕ್ಷೆಗಾಗಿ ಏಮ್ಸ್ ಗೆ ಕಳಿಸಲಾಗಿದೆ. ಎಫ್‌ಐಆರ್ ದಾಖಲಿಸಲಾಗಿದೆ. ಕೊಲೆಗೆ ಬಳಸಿದ ಆಯುಧ, ಕಲ್ಲುಗಳು ಮತ್ತು ದೊಣ್ಣೆಯನ್ನು ವಶಪಡಿಸಿಕೊಂಡಿದ್ದೇವೆ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read