Viral Video | ‘ವಾಕಾ ವಾಕಾ’ ಹಾಡಿಗೆ ತಂದೆ- ಮಗಳ ನೃತ್ಯ; ನೆಟ್ಟಿಗರು ಫಿದಾ

Pablo and Veronica

ಜಗತ್‌ಪ್ರಸಿದ್ದ ಗಾಯಕಿ ಶಕೀರಾ ಅವರ ಐಕಾನಿಕ್ ಸಾಂಗ್ ‘ವಾಕಾ ವಾಕಾ’ ಗೆ ತಂದೆ- ಮಗಳು ನೃತ್ಯ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪುಟ್ಟ ಹುಡುಗಿಯ ಅದ್ಭುತ ನೃತ್ಯದ ಚಲನೆಗಳು ನೆಟ್ಟಿಗರ ಮನಗೆದ್ದಿದೆ.

ಬ್ರೆಜಿಲ್‌ನ ಜನಪ್ರಿಯ ತಂದೆ-ಮಗಳ ಜೋಡಿಯಾದ ಪ್ಯಾಬ್ಲೋ ಮತ್ತು ವೆರೋನಿಕಾ ಅವರು ವಾಕಾ ವಾಕಾ ಹಾಡಿಗೆ ನೃತ್ಯ ಮಾಡುತ್ತಿರುವ ವೀಡಿಯೊವನ್ನು ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.

ಇದರಲ್ಲಿ ‘ವಾಕಾ ವಾಕಾ’ ಹಾಡಿನ ನೃತ್ಯವನ್ನು ಅತ್ಯಂತ ಪರಿಪೂರ್ಣತೆಯಿಂದ ಸಂಯೋಜಿಸಿದ್ದಾರೆ. ಬಿಳಿ ಬಟ್ಟೆಗಳನ್ನು ಧರಿಸಿ ಪಾಬ್ಲೋ ಮತ್ತು ವೆರೋನಿಕಾ ಇಬ್ಬರೂ ಸಂತೋಷದಿಂದ ನೃತ್ಯ ಮಾಡುತ್ತಾ ಖುಷಿಪಟ್ಟಿದ್ದಾರೆ. ತಂದೆ – ಮಗಳ ಈ ಅದ್ಭುತ ನೃತ್ಯವನ್ನು ಮೆಚ್ಚಿಕೊಂಡಿರುವ ನೆಟ್ಟಿಗರು ಅವರನ್ನು ಹಾಡಿ ಹೊಗಳಿದ್ದಾರೆ.

ಪ್ಯಾಬ್ಲೋ ಪುಹ್ಲೆ ಬ್ರೆಜಿಲಿಯನ್ ದಂತವೈದ್ಯ. ಅವರು ತಮ್ಮ ಮಗಳು ವೆರೋನಿಕಾ ಜೊತೆ ಆಗಾಗ್ಗೆ ನೃತ್ಯ ಮಾಡುತ್ತಾ ಅವುಗಳನ್ನು ಇಂಟರ್ನೆಟ್ ನಲ್ಲಿ ಹಂಚಿಕೊಳ್ಳುತ್ತಾರೆ. 2022 ರಲ್ಲಿ ಈ ಬ್ರೆಜಿಲಿಯನ್ ತಂದೆ-ಮಗಳ ಜೋಡಿ ಅಂದಿನ ವೈರಲ್ ಹಾಡು ‘ಕಚಾ ಬಾದಮ್’ ಗೆ ನೃತ್ಯ ಮಾಡಿ ವಿಡಿಯೋ ಪೋಸ್ಟ್ ಮಾಡಿತ್ತು. ಇವರ ನೃತ್ಯ ವೀಡಿಯೊಗಳಿಗೆ ಅಪಾರ ಭಾರತೀಯ ಅಭಿಮಾನಿಗಳಿದ್ದಾರೆ. ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ 30 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read