ಜನವರಿ 12ಕ್ಕೆ ತೆರೆ ಕಾಣಲಿದೆ ‘ರಂಗಸಮುದ್ರ’

ರಾಜಕುಮಾರ ಅಸ್ಕಿ ನಿರ್ದೇಶನದ ‘ರಂಗಸಮುದ್ರ’ ಸಿನಿಮಾ ಮುಂದಿನ ವರ್ಷ ಜನವರಿ 12ರಂದು  ರಾಜ್ಯಾದ್ಯಂತ ತೆರೆ ಮೇಲೆ ಬರಲಿದೆ. ಈ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ.

ಈ ಚಿತ್ರದಲ್ಲಿ ಸಂಪತ್ ರಾಜ್,  ರಂಗಾಯಣ ರಘು, ದಿವ್ಯ ಗೌಡ, ಕಾರ್ತಿಕ್ ವರದರಾಜ್, ಕೋಕಿಲ, ಉಗ್ರಂ ಮಂಜು, ಮಿಮಿಕ್ರಿ ಗೋಪಿ, ಸ್ಕಂದ, ಪ್ರೀತಮ್, ಗುರುರಾಜ್ ಹೊಸಕೋಟೆ, ಸದಾನಂದ ಮಹೇಂದ್ರ ಸೇರಿದಂತೆ ಹಲವರ ತಾರಾ ಬಳಗವಿದೆ.

ಹೊಯ್ಸಳ ಕ್ರಿಯೇಶನ್ಸ್ ಬ್ಯಾನರ್ ನಡಿ ಹೊಯ್ಸಳ ಕೋಣನೂರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ದೇಸಿ ಮೋಹನ್ ಸಂಗೀತ ಸಂಯೋಜನೆ ನೀಡಿದ್ದಾರೆ. ಶ್ರೀಕಾಂತ್ ಸಂಕಲನವಿದ್ದು, ಆರ್ ಗಿರಿ ಛಾಯಾಗ್ರಹಣವಿದೆ. ವಾಗೀಶ್ ಚನ್ನಗಿರಿ ಸಾಹಿತ್ಯವಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read