ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ’ರಬ್ಬರ್ ಮೊಟ್ಟೆಗಳು’ ದೊರೆತಿವೆ ಎಂಬ ಬಗ್ಗೆ ವಿಡಿಯೋ ವೈರಲ್ ಆಗಿತ್ತು. ಆದರೆ ಅವುಗಳು ರಬ್ಬರ್ ಅಥವಾ ಪ್ಲಾಸ್ಟಿಕ್ ಮೊಟ್ಟೆಗಳಲ್ಲ ಎಂಬುದು ದೃಢವಾಗಿದೆ. ಥೇಟ್ ರಬ್ಬರ್ ಅಥವಾ ಪ್ಲಾಸ್ಟಿಕ್ ಮೊಟ್ಟೆಯಂತೆಯೇ ಕಾಣುತ್ತಿದ್ದ ಅವುಗಳು ಏನು? ಎಂಬ ಬಗ್ಗೆ ಇಲ್ಲಿದೆ ಸ್ಪಷ್ಟ ಮಾಹಿತಿ.
ತಗಡೂರು ಗ್ರಾಮದ ಅಂಗಡಿಯೊಂದರಲ್ಲಿ ರಬ್ಬರ್ ಮೊಟ್ಟೆ ದೊರೆತಿದೆ ಎಂಬುದು ಸುಳ್ಳು ಸುದ್ದಿ. ವೈರಲ್ ಆಗಿರುವುದು ‘ರಬ್ಬರ್ ಅಥವಾ ಪ್ಲಾಸ್ಟಿಕ್’ ಮೊಟ್ಟೆಗಳಲ್ಲ. ಅವುಗಳು ನಿಜವಾದ ಮೊಟ್ಟೆ. ಆದರೆ ಬಹಳ ಹಳೆಯ ಮೊಟ್ಟೆಗಳಾಗಿದ್ದರಿಂದ ರಬ್ಬರ್ ಮೊಟ್ಟೆಯಂತೆ ಭಾಸವಾಗುತ್ತಿದೆಯಷ್ಟೇ.
ಹಳೇಯ ಮೊಟ್ಟೆಯನ್ನು ಜಾಸ್ತಿ ಬೇಯಿಸಿದ್ದರಿಂದ ರಬ್ಬರ್ ಮೊಟ್ಟೆಯಂತೆ ಕಾಣುತ್ತಿದೆ. ಹಾಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ‘ರಬ್ಬರ್ ಮೊಟ್ಟೆ ದೊರೆತಿದೆ’ ಎಂಬುದು ಸುಳ್ಳು. ಅವು ಅಸಲಿ ಮೊಟ್ಟೆಗಳು ಎಂಬುದು ಸ್ಪಷ್ಟವಾಗಿದೆ.