ನಾಳೆ ಮಂಡ್ಯದಲ್ಲಿ ನಡೆಯಲಿರುವ ‘ಕಾಟೇರ’ ಸಿನಿಮಾದ ಪ್ರಿ ರಿಲೀಸ್ ಇವೆಂಟ್ ಕಾರ್ಯಕ್ರಮದಲ್ಲಿ ಥೀಮ್ ಸಾಂಗ್ ವೊಂದನ್ನು ಬಿಡುಗಡೆ ಮಾಡಲಿದ್ದಾರೆ. ಈ ಕುರಿತು ಚಿತ್ರತಂಡ ಇಂದು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದೆ. ರೈತರ ದಿನಾಚರಣೆ ಪ್ರಯುಕ್ತ ಈ ಹಾಡು ರಿಲೀಸ್ ಆಗಲಿದ್ದು ರೈತರ ಕುರಿತ ಹಾಡು ಇದಾಗಿದೆ.
ತರುಣ್ ಸುಧೀರ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರವನ್ನು ರಾಕ್ ಲೈನ್ ವೆಂಕಟೇಶ್ ತಮ್ಮ ರಾಕ್ ಲೈನ್ ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದು, ವಿ ಹರಿಕೃಷ್ಣ ಸಂಗೀತ ಸಂಯೋಜನೆ ನೀಡಿದ್ದಾರೆ. ದರ್ಶನ್ ಗೆ ಜೋಡಿಯಾಗಿ ಮಾಲಾಶ್ರೀ ಪುತ್ರಿ ಆರಾಧನಾ ಅಭಿನಯಿಸಿದ್ದು, ಶ್ರುತಿ, ಕುಮಾರ್ ಗೋವಿಂದ್, ಮಾಸ್ಟರ್ ರೋಹಿತ್, ಬಿರಾದಾರ್, ಜಗಪತಿ ಬಾಬು ತೆರೆ ಹಂಚಿಕೊಂಡಿದ್ದಾರೆ. ಡಿಸೆಂಬರ್ 29 ರಂದು ಈ ಸಿನಿಮಾ ರಾಜ್ಯದ್ಯಂತ ತೆರೆ ಕಾಣಲಿದೆ.