ಪ್ರೇಗ್: ಜೆಕ್ ಗಣರಾಜ್ಯದ ರಾಜಧಾನಿ ಪ್ರೇಗ್ ನ ವಿಶ್ವವಿದ್ಯಾಲಯದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ ಮತ್ತು 25 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೆಕ್ ಪೊಲೀಸರು ಮತ್ತು ನಗರದ ರಕ್ಷಣಾ ಸೇವೆ ಗುರುವಾರ ಈ ಪ್ರಕರಣವನ್ನು ವರದಿ ಮಾಡಿದೆ. ಆದಾಗ್ಯೂ, ಪ್ರೇಗ್ ನಗರದಲ್ಲಿ ನಡೆದ ಗುಂಡಿನ ದಾಳಿಯ ಸಂದರ್ಭಗಳನ್ನು ಪೊಲೀಸರು ಉಲ್ಲೇಖಿಸಿಲ್ಲ. ದಾಳಿಕೋರನನ್ನು ವಿಶ್ವವಿದ್ಯಾಲಯದ ವಿದ್ಯಾರ್ಥಿ ಎಂದು ಪ್ರೇಗ್ ಪೊಲೀಸ್ ಮುಖ್ಯಸ್ಥರು ಗುರುತಿಸಿದ್ದಾರೆ.
ನಗರದ ಎಲ್ಲಾ ಜಂಕ್ಷನ್ ಗಳನ್ನು ಸೀಲ್ ಮಾಡಲಾಗಿದೆ, ಜನರಿಗೆ ಮನೆಯಲ್ಲಿಯೇ ಇರಲು ಸೂಚನೆ ನೀಡಲಾಗಿದೆ ಚಾರ್ಲ್ಸ್ ವಿಶ್ವವಿದ್ಯಾಲಯದ ತತ್ವಶಾಸ್ತ್ರ ವಿಭಾಗವನ್ನು ಸಂಪೂರ್ಣವಾಗಿ ಸ್ಥಳಾಂತರಿಸಲಾಗಿದೆ ಎಂದು ಪ್ರೇಗ್ ಮೇಯರ್ ಬೊಹುಸ್ಲಾವ್ ಸ್ವೊಬೊಡಾ ಹೇಳಿದ್ದಾರೆ. ಅಲ್ಲದೆ, ಜಂಕ್ಷನ್ ಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಸ್ಥಳೀಯ ಜನರಿಗೆ ರಸ್ತೆಗಳಲ್ಲಿ ಬರದಂತೆ ಸೂಚನೆ ನೀಡಲಾಗಿದೆ, ಜೊತೆಗೆ ಜನರು ಮನೆಯೊಳಗೆ ಇರುವಂತೆ ಒತ್ತಾಯಿಸಲಾಗಿದೆ.