ನಟ ಸೈಫ್ ಅಲಿಖಾನ್ ಅವರ ಐತಿಹಾಸಿಕ, ಐಷಾರಾಮಿ ಮನೆ ಹರಿಯಾಣದಲ್ಲಿರುವ ಪಟೌಡಿ ಪ್ಯಾಲೇಸ್ ನಲ್ಲಿ ಸದ್ಯ ಕರೀನಾ ಕಪೂರ್ ದಂಪತಿ ಕಾಲ ಕಳೆಯುತ್ತಿದ್ದಾರೆ. ಅಲ್ಲಿನ ಕೆಲ ಫೋಟೋಗಳನ್ನು ನಟಿ ಕರೀನಾ ಕಪೂರ್ ತಮ್ಮ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.
ಇದೇ ಫೋಟೋಗಳು ಅಭಿಮಾನಿಗಳು ಹಲವು ಪ್ರಶ್ನೆಗಳನ್ನು ಕೇಳಲು ಕಾರಣವಾಗಿವೆ. ಅದೇನೆಂದರೆ ಕರೀನಾ ಕಪೂರ್ ಖಾನ್ ಇದೀಗ ಪಟೌಡಿ ಅರಮನೆಯಲ್ಲಿ ವಿಹಾರ ಮಾಡುತ್ತಿದ್ದು, ಕೆಲ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.
ಇದರಲ್ಲಿ ಪ್ಯಾಲೇಸ್ ಮೇಲಿರುವ ಧ್ವಜವೊಂದು ಅಭಿಮಾನಿಗಳ ಗಮನ ಸೆಳೆದಿದೆ. ಅದು ಭಾರತದ ತ್ರಿವರ್ಣ ಧ್ವಜವಲ್ಲ. ಅನೇಕ ನೆಟ್ಟಿಗರು ಈ ಬಗ್ಗೆ ಕುತೂಹಲ ಹೊಂದಿದ್ದು, ಧ್ವಜದ ಬಣ್ಣದ ಬಗ್ಗೆ ಕುತೂಹಲದಿಂದ ಇದು ಯಾವ ದೇಶದ ಧ್ವಜ ಮೇಡಂ ಎಂದು ಕರೀನಾ ಕಪೂರ್ ಅವರನ್ನು ಕೇಳಿದ್ದಾರೆ. ಹಲವರು ಇದು ಪಟೌಡಿ ನವಾಬನ ರಾಜಪ್ರಭುತ್ವದ ಧ್ವಜ ಎಂದು ಕಮೆಂಟ್ ಮಾಡಿದ್ದಾರೆ.
* ಪಟೌಡಿ ಅರಮನೆಯೊಳಗಿನ ಧ್ವಜದ ಬಗ್ಗೆ ಇಲ್ಲಿದೆ ಮಾಹಿತಿ
ಪಟೌಡಿ ಪ್ಯಾಲೇಸ್ ನಲ್ಲಿನ ಧ್ವಜವು ಪಟೌಡಿಗಳ ಸಂಕೇತವಾಗಿದೆ ಎಂದು ಹೇಳಲಾಗುತ್ತದೆ. ನವಾಬ ಸೈಫ್ ಅಲಿ ಖಾನ್ ಅವರ ಪೂರ್ವಜರು ಈ ಧ್ವಜವನ್ನು ವಿಜಯದ ಸಂಕೇತವಾಗಿ ಬಳಸುತ್ತಿದ್ದರು. ಪಟೌಡಿ ಕುಟುಂಬದ ಕುಡಿ ಸೈಫ್ ಬಾಲಿವುಡ್‌ನಲ್ಲಿ ಏಕೈಕ ರಾಯಲ್ ಸದಸ್ಯರಾಗಿದ್ದಾರೆ.