ಬಡವರ ಫೈವ್ ಸ್ಟಾರ್ ಎಂದೇ ಫೇಮಸ್ ಆದ ‘ಇಂದಿರಾ ಕ್ಯಾಂಟೀನ್’ ಹೈಟೆಕ್ ಆಗಲಿದ್ದು, ಸರ್ಕಾರ ಹೊಸ ಮೆನು ಬಿಡುಗಡೆ ಮಾಡಿದೆ.
ಇಂದಿರಾ ಕ್ಯಾಂಟೀನ್ ಹೊಸ ಬಗೆಯ ಶುಚಿಕರವಾದ ತಿಂಡಿ-ಊಟದೊಂದಿಗೆ ಜನರನ್ನು ತನ್ನತ್ತ ಸೆಳೆಯಲಿದೆ. ಇಂದಿರಾ ಕ್ಯಾಂಟೀನ್ ಊಟದ ಹೊಸ ಮೆನುವನ್ನು ಸಿಎಂ ಸಿದ್ದರಾಮಯ್ಯ ಬಿಡುಗಡೆ ಮಾಡಿದ್ದಾರೆ.
ಬಡಜನರ ಹಸಿವು ನೀಗಿಸುವ ಉದ್ದೇಶದೊಂದಿಗೆ ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಜಾರಿಗೆ ತಂದಿದ್ದ ಇಂದಿರಾ ಕ್ಯಾಂಟೀನ್ ಗಳು ಈಗ ಮತ್ತಷ್ಟು ಶುಚಿ, ರುಚಿಯಾಗಿ ಹೊಸ ಬಗೆಯ ಆಹಾರದೊಂದಿಗೆ ಗ್ರಾಹಕರ ಸೇವೆಗೆ ಸಿದ್ಧಗೊಂಡಿವೆ. ರಿಯಾಯಿತಿ ದರದಲ್ಲಿ ಸ್ವಾದಿಷ್ಟ ತಿಂಡಿ, ಊಟ ದೊರೆಯುವ ಇಂದಿರಾ ಕ್ಯಾಂಟೀನ್ ಯೋಜನೆಯ ಸಂಪೂರ್ಣ ಸದುಪಯೋಗ ಪಡೆಯಿರಿ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಬೆಳಗ್ಗಿನ ತಿಂಡಿಗೆ (ಬೆಳಿಗ್ಗೆ 7ರಿಂದ 10) ಇಡ್ಲಿ-ಸಾಂಬಾರ್, ಇಡ್ಲಿ-ಚಟ್ನಿ, ವೆಜ್ ಪುಲಾವ್-ರಾಯಿತಾ, ಖಾರಾಬಾತ್-ಚಟ್ನಿ, ಚೌಚೌಬಾತ್- ಚಟ್ನಿ, ಮಂಗಳೂರು ಬನ್ಸ್, ಬಿಸಿಬೇಳೆ ಬಾತ್-ಬೂಂದಿ, ಪೊಂಗಲ್-ಚಟ್ನಿ, ಬ್ರೆಡ್-ಜಾಮ್ ಮತ್ತು ಬನ್ಸ್ ನೀಡಲಾಗುತ್ತಿದ್ದು, ಪ್ಲೇಟ್ಗೆ 5 ರೂ, ಫಿಕ್ಸ್ ಮಾಡಲಾಗಿದೆ.
ಮಧ್ಯಾಹ್ನದ ಊಟಕ್ಕೆ (ಮಧ್ಯಾಹ್ನ 1ರಿಂದ 3) ಅನ್ನ-ತರಕಾರಿ ಸಂಬಾರು, ಖೀರು, ಅನ್ನ-ತರಕಾರಿ ಸಾಂಬಾರು, ರಾಯಿತಾ, ಅನ್ನ-ತರಕಾರಿ ಸಾಂಬಾರು, ಮೊಸರನ್ನ, ರಾಗಿ ಮುದ್ದೆ-ಸೊಪ್ಪಿನ ಸಾರು, ಖೀರು ಮತ್ತು ಚಪಾತಿ-ಸಾಗು, ಖೀರು ಕೊಡಲಾಗುತ್ತಿದ್ದು, ಪ್ಲೇಟ್ಗೆ 10 ರೂ, ಫಿಕ್ಸ್ ಮಾಡಲಾಗಿದೆ.
ಇನ್ನೂ ರಾತ್ರಿ ಊಟದ ಮೆನು ನೋಡುವುದಾದರೆ (ಸಂಜೆ 7:30 ರಿಂದ ರಾತ್ರಿ 9) ಅನ್ನ-ತರಕಾರಿ ಸಾಂಬಾರು, ಅನ್ನ-ತರಕಾರಿ ಸಾಂಬಾರು, ರಾಗಿ ಮುದ್ದೆ-ಸೊಪ್ಪಿನ ಸಾರು ಮತ್ತು ಚಪಾತಿ-ವೆಜ್ ಗ್ರೇವಿ ಇರುತ್ತದೆ. ದರ ಪ್ಲೇಟ್ಗೆ 10 ರೂ, ಬೆಲೆ ಇರಲಿದೆ.